ಬಡತನ ತಾಳದೆ ಈ ಹೆತ್ತಮ್ಮ ಮಾಡಿದ್ದೇನು ಗೊತ್ತಾ?!
ವಯಸ್ಸಾದ ಮಹಿಳೆಯೊಬ್ಬರಿಗೆ ಮಗುವನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆ ಮಹಿಳೆಯನ್ನು ವಿಚಾರಿಸಿದಾಗ ತನಗೆ ಮೊಮ್ಮಕ್ಕಳಿಲ್ಲದ ಕಾರಣಕ್ಕೆ ಮಗುವನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮಗುವನ್ನು ವಶಕ್ಕೆ ಪಡೆದಿರುವ ಪೊಲೀಸರು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಹೆತ್ತಮ್ಮನ ಮೇಲೆ ಪ್ರಕರಣ ದಾಖಲಿಸಲಾಗಿದೆ.