ಬಿರ್ಲಾರಿಂದ ಮೋದಿ ಲಂಚ ಸ್ವೀಕಾರ: ಕೇಜ್ರಿವಾಲ್

ಬುಧವಾರ, 16 ನವೆಂಬರ್ 2016 (10:07 IST)
ನವದೆಹಲಿ: ಅಮಾನ್ಯವಾದ ನೋಟುಗಳ ಕುರಿತು ಒಂದೆಡೆ ಪರ, ವಿರೋಧದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ಬೆಳಗ್ಗೆಯಿಂದ ರಾತ್ರಿವರೆಗೂ ಬ್ಯಾಂಕ್ ಎದುರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇವುಗಳ ನಡುವೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಲಂಚ ಸ್ವೀಕರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಆಂಗ್ಲ ದೈನಿಕ ವರದಿ ಮಾಡಿದೆ.

ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆಯಿಂದ 2012 ನವೆಂಬರ್ 16 ರಂದು ಕೆಲವು ಯೋಜನೆಗಳಿಗೆ ಸಂಬಂಧಿಸಿ ಸ್ವತಃ ಲಂಚ ತೆಗೆದುಕೊಂಡಿದ್ದರು. ಆದಾಯ ತೆರಿಗೆ ಇಲಾಖೆ ಶುಬೆಂದು ಅಮಿತಾಭ್ ಮನೆಗೆ 2013 ಅಕ್ಟೋಬರ್ 15 ರಂದು ದಾಳಿ ನಡೆಸಿದಾಗ ಈ ವಿಷಯ ಬಹಿರಂಗಗೊಂಡಿದೆ. ಶುಬೆಂದೊ ಅವರು ಆಗ ಆದಿತ್ಯ ಬಿರ್ಲಾ ಗ್ರೂಪ್'ನ ಕಾರ್ಯಕಾರಿ ಅಧ್ಯಕ್ಷರಾಗಿದ್ದರು ಎಂದು ಹೇಳಿದ್ದಾರೆ.
 
ಆದಾಯ ತೆರಿಕೆ ಇಲಾಖೆ ಶುಬೆಂದೊ ಅವರ ಬ್ಲ್ಯಾಕ್ ಬ್ಲೆರಿ ಹಾಗೂ ಲ್ಯಾಪ್'ಟಾಪ್'ಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಮೋದಿ ಲಂಚ ಸ್ವೀಕರಿಸಿರುವುದ ಬಹಿರಂಗಗೊಂಡಿದೆ. ಇದು ಲಡ್ಜರ್'ನಲ್ಲಿ ದಾಖಲಾಗಿದೆ. ಅಲ್ಲದೆ ಆಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಸಂದರ್ಭದಲ್ಲಿ ಅವರು ಮೋದಿ ಮೇಲೆ ಕ್ರಮಕ್ಕೆ ಮುಂದಾಗಿದ್ದರು. ಆದರೆ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಪ್ರಕರಣಕ್ಕೆ ತಿಲಾಂಜಲಿ ನೀಡಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ