ನವದೆಹಲಿ : ಈಗಾಗಲೇ ಎರಡು ಡೋಸ್ ಪಡೆದ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು,
ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಲಿದೆ.
ಕಳೆದ ಡಿ. 25ರಂದು ಪ್ರಧಾನಿ ಮೋದಿ ಜ.10 ರಿಂದ 60 ವರ್ಷ ದಾಟಿದವರಿಗೆ, ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವುದಾಗಿ ಪ್ರಕಟಿಸಿದ್ದರು.
ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ ಪೂರ್ವ ರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂತಹವರು ಬೂಸ್ಟರ್ ಡೋಸ್ನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅದರಂತೆ ಜ.8ರ ಶನಿವಾರದಿಂದಲೇ ಕೋವಿನ್ ಪೋರ್ಟಲ್ನಲ್ಲಿ 3ನೇ ಡೋಸ್ ಪಡೆಯಲು ಬುಕ್ಕಿಂಗ್ ಆರಂಭವಾಗಿದೆ. ಲಸಿಕಾ ಕೇಂದ್ರಗಳಲ್ಲಿ ನೇರವಾಗಿ ಬುಕ್ ಮಾಡಿಸಿ ಲಸಿಕೆ ಪಡೆಯಲು ಅವಕಾಶವಿದೆ.