ಪ್ರಧಾನಿ ಮೋದಿ ಸಂಬಳ ಎಷ್ಟು ಗೊತ್ತಾ?

ಶುಕ್ರವಾರ, 14 ಅಕ್ಟೋಬರ್ 2016 (11:18 IST)
ಒಂದು ದೇಶದ ಪವರ್ ಎಂದರೆ ಆಯಾ ದೇಶದ ಮುಖ್ಯಸ್ಥ. ಆತನೇ ಆ ದೇಶದ ಶಕ್ತಿ.  ದೇಶವನ್ನು ಕಟ್ಟುವವನು ಅವನೇ, ಹಾಳುಗೆಡವವುವನು ಅವನೇ. ಅವನ ಆಣತಿ ಇಲ್ಲದೇ ಹುಲ್ಲುಕಡ್ಡಿ ಕೂಡ ಅಲ್ಲಾಡಲಾರದು. ಹೀಗೆ ದೇಶದ ಪಾಟ್ ಮೋಸ್ಟ್‌ನಲ್ಲಿರುವವರ ಸಂಬಳ ಎಷ್ಟಿರತ್ತೆ ಎಂಬ ಕುತೂಹಲ ಎಲ್ಲರಿಗೂ ಇರತ್ತೆ. ಪ್ರಧಾನಿ ಮೋದಿ ಎಷ್ಟು ಸಂಬಳವನ್ನು ಎಣಿಸುತ್ತಿರಬಹುದು? ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಒಬಾಮಾ ಸೆಲರಿ ಎಷ್ಟು? ‌ಪವರ್‌ಗೆ ತಕ್ಕನಾಗಿ ಸಂಬಳ ಸಿಗತ್ತಾ? ಇದೆಲ್ಲ ಪ್ರಶ್ನೆ ನಿಮ್ಮನ್ನು ಕಾಡುತ್ತಿವೆಯೇ?  

 
8 ಗಂಟೆ ಕೆಲಸ ಮಾಡುವ ಸರ್ಕಾರಿ ಅಧಿಕಾರಿಯೇ ಇಂದಿನ ಕಾಲದಲ್ಲಿ ಭಾರಿ ಮೊತ್ತದ ಸಂಬಳವನ್ನು ಜೇಬಿಗಿಳಿಸುತ್ತಿರುತ್ತಾನೆ. ಅಂದ ಮೇಲೆ ಸಂಪೂರ್ಣ ದೇಶವನ್ನೇ ಸಂಭಾಳಿಸುವ ಮುಖ್ಯಸ್ಥನ ಸಂಬಳ ಎಷ್ಟಿರತ್ತೆ. ಅವರ ಕೆಲಸ- ಕಾರ್ಯಕ್ಕೆ ತಕ್ಕಾನಾಗಿ ಇರತ್ತಾ? 
 
ವಿಚಿತ್ರವೆಂದರೆ ಮೋದಿ ಸಂಬಳ ಚೀನಾ ಅಧ್ಯಕ್ಷನಿಗಿಂತ ಹೆಚ್ಚು. ಜಗತ್ತಿನಲ್ಲೇ ಹೆಚ್ಚು ಪವರ್‌ಫುಲ್ ಎಂದು ಗುರುತಿಸಿಕೊಳ್ಳುವ ಒಬಾಮಾ ಸಂಬಳ ಖಾಸಗಿ ಕಂಪನಿಯೊಂದರ ಸಿಇಓಗಿಂತ ಕಡಿಮೆ. ಇವೆಲ್ಲರಿಗಿಂತ ಚಿಕ್ಕ ದೇಶವೊಂದರ ಪ್ರಧಾನಿ ಸಂಬಳ ಹೆಚ್ಚು ಎಂದರೆ ನಂಬುತ್ತೀರಾ? 
 
ಹೌದು, ಚೀನಾ ಮತ್ತು ಭಾರತ ಭವಿಷ್ಯದ ಸೂಪರ್ ಪವರ್ ರಾಷ್ಟ್ರಗಳು. ಎರಡರ ಜಿಡಿಪಿ ದರ ವೇಗವಾಗಿ ಹೆಚ್ಚುತ್ತಿದೆ. ಆದರೆ ನಮ್ಮ ದೇಶದ ಪ್ರಧಾನಿ ವಾರ್ಷಿಕ ಸುಮಾರು 19 ಲಕ್ಷ  ಪಡೆದರೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಂಬಳ ಸುಮಾರು 13.8 ಲಕ್ಷ. 
 
ಜಿಡಿಪಿ ದರ ಅತ್ಯುನ್ನತವಾಗಿರುವ ಮಿಸ್ಟರ್ ಪ್ರೆಸಿಡೆಂಟ್ ಸಂಬಳ ಒಬ್ಬ ಸಿಇಓ ಸಂಬಳಕ್ಕಿಂತ ಕಡಿಮೆಯಂತೆ. ಹೌದು  ಬರಾಕ್ ಒಬಾಮಾ ಸಂಬಳ ಕೋಟಿಗಳಲ್ಲಿದೆ. ಆದರೆ ಅದು ಅತ್ಯುನ್ನತ ಕಂಪನಿ ಕಾರ್ಯ ನಿರ್ವಹಣಾಧಿಕಾರಿಗಿಂತ ಕಡಿಮೆ. ಅತ್ಯಂತ ಪವರ್ ಫುಲ್ ವ್ಯಕ್ತಿಯಾಗಿರುವ ಒಬಾಮಾ ಲಕ್ಸುರಿ ಲೈಫ್ ಲೀಡ ಮಾಡುತ್ತಾರೆ. ಆದರೆ ಅವರ ಸಂಬಳ ಚಿಕ್ಕದೇಶವೊಂದರ ಪ್ರಧಾನಿಗಿಂತ ಕಡಿಮೆ. ಅವರು ಪಡೆಯುವುದು 2.65ಕೋಟಿ ಸಂಬಳವನ್ನು. ಇಂಗ್ಲೆಂಡ್ ಪ್ರಧಾನಿ ಕೈ ಸೇರುವುದು ವಾರ್ಷಿಕ  1.20 ಕೋಟಿ.
 
ಆದರೆ ಇವರೆಲ್ಲರಿಗಿಂತ ಚಿಕ್ಕದೇಶವೊಂದರ ಪ್ರಧಾನಿ ಹೆಚ್ಚು ಸಂಬಳವನ್ನು ಪಡೆಯುತ್ತಾನೆ ಎಂಬುದು ಆಶ್ಚರ್ಯಕರ ಸಂಗತಿ. 
ಸಿಂಗಾಪುರ ಎನ್ನೋ ಚಿಕ್ಕ ದೇಶದ ಪ್ರಧಾನ ಮಂತ್ರಿ ಲೀ ಸೀನ್ ಲೂಂಗ್ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಂಬಳ ಪಡೆಯುವ ಮುಖ್ಯಸ್ಥ. ಅವರಿಗಿರುವ ಸಂಬಳ 1.7 ಮಿಲಿಯನ್ ಡಾಲರ್.  ಅಂದರೆ 11.3 ಕೋಟಿ ರೂಪಾಯಿ. ಇದು ಫ್ರಾನ್ಸ್, ಜಪಾನ್, ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳ ಮುಖ್ಯಸ್ಥರು ತೆಗೆದುಕೊಳ್ಳುವ ಒಟ್ಟು ಸಂಬಳಕ್ಕಿಂತ ಜಾಸ್ತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ