2019 ರ ಚುನಾವಣೆಗೆ ಯುಪಿಎ ಪ್ರಧಾನಿ ಅಭ್ಯರ್ಥಿ ಯಾರು ಗೊತ್ತಾ?!

ಶನಿವಾರ, 18 ಮಾರ್ಚ್ 2017 (09:43 IST)
ನವದೆಹಲಿ: ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿರುವುದಕ್ಕೆ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಣೆ ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಗೊತ್ತಾ?

 

ಇತ್ತೀಚೆಗೆ ನಡೆದ ಆನ್ ಲೈನ್ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿಯನ್ನು ಹಿಂದಿಕ್ಕಿ ಕೇರಳ ಸಂಸದ ಶಶಿ ಥರೂರ್ ರನ್ನು ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ಎಂದು ಜನ ಮತ ಹಾಕಿದ್ದರು. ಅದಕ್ಕೆ ಈಗ ಥರೂರ್ ಪ್ರತಿಕ್ರಿಯಿಸಿದ್ದು, ಜನರ ಅಭಿಪ್ರಾಯ ನೋಡಿ ಖುಷಿಯಾಗಿದೆ. ಆದರೆ ನಾನು ಪ್ರಧಾನಿಯಾಗಲ್ಲ ಎಂದಿದ್ದಾರೆ.

 
ಆನ್ ಲೈನ್ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿಯನ್ನು ಹಿಂದಿಕ್ಕಿ ಥರೂರ್ ಮೊದಲ ಸ್ಥಾನ ಪಡೆದಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ತಿಳುವಳಿಕೆಯುಳ್ಳ ಥರೂರ್ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ