ಭಯೋತ್ಪಾದಕರನ್ನು ಹೆಚ್ಚು ಹತ್ಯೆ ಮಾಡಿದ ಸರ್ಕಾರ ಯಾವುದು? ಎನ್ ಡಿಎಯಾ? ಯುಪಿಎಯಾ?

ಬುಧವಾರ, 3 ಜನವರಿ 2018 (09:31 IST)
ನವದೆಹಲಿ: ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸದ ಕುರಿತು ಆಡಳಿತಾರೂಢ ಎನ್ ಡಿಎ ಮತ್ತು ವಿಪಕ್ಷ ಯುಪಿಎ ಪರಸ್ಪರ ಕೆಸರೆರಚಾಟ ನಡೆಸುತ್ತಲೇ ಇರುತ್ತವೆ. ಆದರೆ ಅಂಕಿ ಅಂಶವೊಂದರ ಪ್ರಕಾರ ಎನ್ ಡಿಎ ಅವಧಿಯಲ್ಲಿ ಯುಪಿಎಗೆ ಹೋಲಿಸಿದರೆ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಎಂದು ಬಹಿರಂಗವಾಗಿದೆ.
 

ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 2014 ರಿಂದ ಇಂದಿನವರೆಗೆ ಆಡಳಿತ ನಡೆಸುತ್ತಿದ್ದು ಈ ಅವಧಿಯಲ್ಲಿ ಒಟ್ಟು 1,094 ಉಗ್ರ ಕೃತ್ಯಗಳು ನಡೆದಿವೆ. ಆದರೆ ಯಪಿಎ 2010 ರಿಂದ 2013 ರ ಆಡಳಿತಾವಧಿಯಲ್ಲಿ 1,218 ಉಗ್ರ ಕೃತ್ಯಗಳು ನಡೆದಿವೆ ಎನ್ನಲಾಗಿದೆ.

ದತ್ತಾಂಶಗಳನ್ನು ಆಧರಿಸಿ ಎನ್ ಐಎ ಈ ವರದಿ ನೀಡಿದೆ. ಉಗ್ರರ ಹತ್ಯೆಯಲ್ಲೂ ಬಿಜೆಪಿ ಮೈತ್ರಿಕೂಟ ಮುಂದಿದ್ದು ಇದುವರೆಗೆ ಒಟ್ಟು 580 ಉಗ್ರರನ್ನು ಸದೆ ಬಡಿಯಲಾಗಿದೆ. ಯುಪಿಎ ಅವಧಿಯಲ್ಲಿ 470 ಉಗ್ರರನ್ನು ಮಟ್ಟ ಹಾಕಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ