ಸಂಪೂರ್ಣ ಬಿಜೆಪಿಯೇ ನೋಟು ನಿಷೇಧದ ವಿರುದ್ಧವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಗುಜರಾತ್ ಬಿಜೆಪಿ ನಾಯಕರು ನೋಟು ನಿಷೇಧದ ವಿರುದ್ಧ ಮಾತನಾಡ ತೊಡಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ನಾಯಕರು ಒಳಗೊಳಗೆ ಪ್ರಧಾನಿಗೆ ಶಾಪ ಹಾಕುತ್ತಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ನೋಟು ನಿಷೇಧದ ಪರಿಣಾಮ ರೈತರ ಮೇಲೆ ಬಹಳಷ್ಟಾಗಿದೆ ಮತ್ತು ಕೃಷಿ ಮಾರುಕಟ್ಟೆ ಎರಡು ತಿಂಗಳುಗಳ ಕಾಲ ಮುಚ್ಚಿಯೇ ಇರಲಿವೆ ಎಂದು ಪೋರ್ ಬಂದರ್ ಸಂಸದ ವಿಠ್ಠಲ್ ರಡಾಡಿಯಾ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ನವೆಂಬರ್ 8 ರಂದು ಪ್ರಧಾನಿ ಮೋದಿ ಹಳೆಯ 500 ಮತ್ತು 1,000ರೂಪಾಯಿ ನೋಟುಗಳನ್ನು ರದ್ದುಗೊಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ