ಆರ್ ಎಸ್ ಎಸ್ ಹಾಗೂ ಬಿಜೆಪಿಯ ಮನುವಾದದ ವಿರುದ್ಧ ಧ್ವನಿ ಎತ್ತಬೇಕು ಎಂದು ರಾಹುಲ್ ಗಾಂಧಿ ಹೇಳಿದ್ಯಾಕೆ…?

ಶುಕ್ರವಾರ, 15 ಜೂನ್ 2018 (14:34 IST)
ನವದೆಹಲಿ : ಮಹಾರಾಷ್ಟ್ರದಲ್ಲಿ ಬಾವಿಯೊಂದರಲ್ಲಿ ಸ್ನಾನ ಮಾಡಿದ್ದಕ್ಕಾಗಿ ದಲಿತ ಯುವಕರನ್ನು ಅರೆಬೆತ್ತಲೆಯಾಗಿ ಥಳಿಸಿದ ಘಟನೆಯ ಬಗ್ಗೆಇದೀಗ  ರಾಹುಲ್ ಗಾಂಧಿ ಅವರು ಟ್ವೀಟರ್ ನಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


ಮಹಾರಾಷ್ಟ್ರದ ಊರೊಂದರಲ್ಲಿ ಸರ್ಣಿಯರಿಗೆ ಸೇರಿದ ಬಾವಿಯಲ್ಲಿ ಸ್ನಾನ ಮಾಡಿದ್ದಕ್ಕಾಗಿ ಇಬ್ಬರು ದಲಿತ ಯುವಕರನ್ನು ಅರೆಬೆತ್ತಲೆಯಾಗಿ ಥಳಿಸಿದ್ದಾರೆ.  ಈ ಘಟನೆಯ ಬಗ್ಗೆ ಬೇಸರಗೊಂಡ ರಾಹುಲ್ ಗಾಂಧಿ ಅವರು ಟ್ವೀಟರ್ ನಲ್ಲಿ ಆ ವಿಡಿಯೋವನ್ನು ಪೋಸ್ಟ್ ಮಾಡಿ, ‘ಹೀಗೆ ಹಿಗ್ಗಾ ಮುಗ್ಗಾ ದಂಡನೆಗೆ ಒಳಗಾಗುತ್ತಿರುವ ಯುವಕರು ಮಾಡಿದ್ದಾರರೂ ಏನು? ಸರ್ಣಿಯರಿಗೆ ಸೇರಿದ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದ ಇವರನ್ನು ಹೀಗೆ ದಂಡನೆಗೆ ಒಳಪಡಿಸುತ್ತಿರುವುದು ಮಾನವತೆಯ ಸಾವಾಗಿದೆ. ಆರ್ ಎಸ್ ಎಸ್ ಮತ್ತು ಬಿಜೆಪಿಯ ಮನುವಾದದ ವಿರುದ್ಧ ನಾವು ಧ್ವನಿ ಎತ್ತದಿದ್ದರೆ ಇತಿಹಾಸ ನಮ್ಮನ್ನೂ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ