ಗುಜರಾತ್ ಶಾಸಕರೊಂದಿಗೆ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡಿದ್ದೇಕೆ ಗೊತ್ತಾ?!
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಟೇಲ್ ಸೋನಿಯಾ ಗಾಂಧಿಗೂ ಕಾರ್ಯದರ್ಶಿಯಾಗಿ ಕಾಂಗ್ರೆಸ್ ನ ನಿಷ್ಠಾವಂತ ಎಂದು ಸಾಬೀತುಪಡಿಸಿದವರು. ರಾಜೀವ್ ಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿರುವ ಪಟೇಲ್ ಒಂದು ವೇಳೆ ಸೋತರೆ ಅದು ಸೋನಿಯಾ ಗಾಂಧಿ ಸೋಲು ಎಂದೇ ವಿಶ್ಲೇಷಿಸಲಾಗಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಅಹಮ್ಮದ್ ಪಟೇಲ್ ಗೆಲುವಿಗೆ ಅವಿರತ ಶ್ರಮಿಸುತ್ತಿದೆ.