ಮುಸ್ಲಿಮರಿಗೆ ಟಿಕೆಟ್ ನೀಡದಿದ್ದಕ್ಕೆ ವಿನಯ್ ಕಟಿಯಾರ್ ಪ್ರತಿಕ್ರಿಯೆ ಇದು

ಮಂಗಳವಾರ, 28 ಫೆಬ್ರವರಿ 2017 (13:06 IST)
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲದಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ವಿನಯ್ ಕಟಿಯಾರ್ ಬಿಜೆಪಿಗೆ ಮತ ನೀಡದ ಮುಸ್ಲಿಮರಿಗೇಕೆ ನಾವು ಟಿಕೆಟ್ ನೀಡಬೇಕು ಎಂದು ಹೇಳುವುದರ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 

ಯುಪಿಯಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದೀಗ ಭಾರಿ ಚರ್ಚೆಗೆ ಕಾರಣವಾಗಿದೆ, ಕೇಂದ್ರ ಸಚಿವರಾದ ಉಮಾಭಾರತಿ, ರಾಜನಾಥಸಿಂಗ್ 'ಕೆಲ ಕ್ಷೇತ್ರಗಳಲ್ಲಾದ್ರೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿತ್ತು' ಎಂದಿದ್ದರು. ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀದಿರುವುದು ತಪ್ಪು ಎಂದು ಉಮಾಭಾರತಿ ಸಹ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಟಿಯಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
 
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಕಟಿಯಾರ್, ಬಿಜೆಪಿಗೆ ಮತ ನೀಡದವರಿಗೇಕೆ ಟಿಕೆಟ್ ನೀಡುವುದು ಎಂದು ಪ್ರಶ್ನಿಸಿರುವುದಲ್ಲದೇ, ಉತ್ತರ ಪ್ರದೇಶದ 5ನೇ ಹಂತದ ಚುನಾವಣೆಯಲ್ಲಿ ಯಾವೊಬ್ಬ ಮುಸ್ಲಿಂ ಅಭ್ಯರ್ಥಿ ಕೂಡ ಗೆಲ್ಲಲಾರ ಎಂದು ಸಹ ಭವಿಷ್ಯ ನುಡಿದಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ನಿನ್ನೆ 5ನೇ ಹಂತದ ಚುನಾವಣೆ ನಡೆದಿದ್ದು 59% ರಷ್ಟು ಮತದಾನವಾಗಿದೆ.
 

ವೆಬ್ದುನಿಯಾವನ್ನು ಓದಿ