ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲಾಗಿದ್ದು ಯಾಕೆ?

ಬುಧವಾರ, 30 ಜೂನ್ 2021 (16:36 IST)
ಮುಂಬೈ: ಶಾ ಅವರ ಶ್ವಾಸಕೋಶದಲ್ಲಿ ಒಂದು ಪ್ಯಾಚ್ ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಯಿತು.
 ಅವರ ಆರೋಗ್ಯ ಸ್ಥಿರವಾಗಿದೆ.

 ಜೊತೆಗೆ ಶಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.
ಹಿರಿಯ ನಟ ನಾಸೀರುದ್ದೀನ್ ಶಾ ನ್ಯುಮೋನಿಯಾ ತೊಂದರೆಯಿಂದಾಗಿ ಮುಂಬೈನ ಹಿಂದೂಜ ಆಸ್ಪತ್ರೆಗೆ ದಾಖಲಾಗಿದ್ದಾರೆ.
 ಶಾ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾಸೀರುದ್ದೀನ್ ಶಾ ಅವರು ಎರಡು ದಿನಗಳ ಕಾಲ ಮೆಡಿಕಲ್ ಅಬ್ಸರ್ವೇಷನ್ನಲ್ಲಿ ಇರಬೇಕೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
 ಶಾ ಅವರ ಶ್ವಾಸಕೋಶದಲ್ಲಿ ಒಂದು ಪ್ಯಾಚ್ ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಯಿತು.
 ಅವರ ಆರೋಗ್ಯ ಸ್ಥಿರವಾಗಿದೆ. ಜೊತೆಗೆ ಶಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.
ಅವರ ಪತ್ನಿ ರತ್ನ ಪಾಠಕ್ ಷಾ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬ ಶಾ ಜೊತೆಯಲ್ಲಿದೆ.
 ಕಳೆದ ವರ್ಷ, ನಾಸೀರುದ್ದೀನ್ ಶಾ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಏಕೆಂದರೆ ಆ ಸಮಯದಲ್ಲಿ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಸಾವನ್ನಪ್ಪಿದ್ದರು. ಆ ಬಳಿಕ ಇವರ ಆರೋಗ್ಯ ಕ್ಷೀಣಿಸುತ್ತಿರುವ ಸುದ್ದಿಯೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ