ಪತಿನಿಷ್ಠೆ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ!
ಶೀಲ ಶಂಕಿಸಿದ ಪತಿಯ ಜೊತೆ ವಾಗ್ವಾದವಾಗಿತ್ತು. ಈ ವೇಳೆ ಪತ್ನಿ ಕಬ್ಬಿಣದ ರಾಡ್ ನಿಂದ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಬಳಿಕ ತಪ್ಪಿಸಿಕೊಳ್ಳಲು ಪತ್ನಿ ಪತಿ ತನ್ನ ಕೈ ಕಡಿಯಲು ಬಂದಿದ್ದರಿಂದ ಗಾಯವಾಗಿದೆ ಎಂದು ನಾಟಕವಾಡಿ ಆಸ್ಪತ್ರೆ ಸೇರಿಕೊಂಡಿದ್ದಾಳೆ.
ಈ ವೇಳೆ ನೆರೆಮನೆಯವರು ಮನೆಗೆ ಬಂದು ನೋಡಿದಾಗ ಪತಿಯ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಕೊಲೆಯಾಗಿರುವುದು ಗೊತ್ತಾಗಿದೆ. ಪತ್ನಿಯನ್ನು ವಿಚಾರಿಸಿದಾಗ ನಿಜ ವಿಚಾರ ಬಯಲಾಗಿದೆ.