ಭಾರತ ವಿಶ್ವದ ಫ್ಯಾಕ್ಟರಿ ಆಗುತ್ತಾ?

ಶನಿವಾರ, 19 ಆಗಸ್ಟ್ 2023 (10:05 IST)
ಭಾರತ ವಿಶ್ವದ ಫ್ಯಾಕ್ಟರಿ ಆಗುತ್ತಾ ಇಲ್ಲವೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. 2014 ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಬಂದ ಬಳಿಕ 27 ಕ್ಷೇತ್ರಗಳಲ್ಲಿ ಹೂಡಿಕೆಯಾಗಿದೆ. ವಿಶ್ವ ಬ್ಯಾಂಕ್ ಪ್ರಕಟಿಸುವ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಉತ್ತಮವಾಗುತ್ತಿದೆ.
 
2014 ರಲ್ಲಿ 142, 2017 ರಲ್ಲಿ 100, 2022 ರಲ್ಲಿ 63ನೇ ಸ್ಥಾನಕ್ಕೆ ಜಿಗಿದಿದೆ. ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಭಾರತ ಚೀನಾಗೆ ಸ್ಪರ್ಧೆ ನೀಡುವುದು ಕಷ್ಟವಾದರೂ ಸಣ್ಣ ಸಣ್ಣ ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ನೀಡಬಹುದು.10 ವರ್ಷಗಳ ಹಿಂದೆ ಆಪಲ್ ಐಫೋನ್ ಬಿಡುಗಡೆಯಾಗಿ 7-8 ತಿಂಗಳ ನಂತರ ಭಾರತದಲ್ಲಿ ಬಿಡುಗಡೆಯಾಗುತ್ತಿತ್ತು. ಆದರೆ ಈಗ ಬಿಡುಗಡೆ ಅಲ್ಲ, ಭಾರತದಲ್ಲೇ ಫೋನ್ ತಯಾರಾಗಿ ವಿಶ್ವಕ್ಕೆ ರಫ್ತು ಮಾಡುವ ಹಂತಕ್ಕೆ ಬೆಳೆದಿದ್ದೇವೆ.

ನಿಜಕ್ಕೂ ಇದು ದೊಡ್ಡ ಸಾಧನೆಯಾದರೂ ಚೀನಾವನ್ನು ಉತ್ಪದನಾ ಕ್ಷೇತ್ರದಲ್ಲಿ ಸೋಲಿಸಬೇಕಾದರೆ ಭಾರತ ತುಂಬಾ ಶ್ರಮ ಪಡಬೇಕು. ಹೀಗಾಗಿ ಈಗ ಬಿತ್ತಿದ ಬೀಜ ಮುಂದೆ ಮರವಾಗಿ ಬೆಳೆದು ಫಲ ನೀಡುವಂತೆ ಇನ್ನು ಮುಂದೆ ದೇಶದಲ್ಲಿ ಆರಂಭವಾಗಲಿರುವ ಫ್ಯಾಕ್ಟರಿಗಳಿಂದ ವಸ್ತುಗಳ ಉತ್ಪಾದನೆ ಹೆಚ್ಚಾದರೆ ನಾವು ಚೀನಾವನ್ನು ಸೋಲಿಸಬಹುದು. ಸರ್ಕಾರದ ಎಲ್ಲಾ ಪ್ರಯತ್ನಗಳು ಫಲ ನೀಡಿದರೆ ಮುಂದೆ ನಮ್ಮ ಕೈಯಲ್ಲಿ ಅಲ್ಲ ವಿದೇಶಿಯರ ಕೈಯಲ್ಲೂ ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ನೋಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ