ಕೆನಡಾ ಪೌರತ್ವ ಬಿಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಸಂಪೂರ್ಣ ಭಾರತೀಯ

ಮಂಗಳವಾರ, 15 ಆಗಸ್ಟ್ 2023 (16:31 IST)
ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಕೆನಡಾ ಪೌರತ್ವ ತ್ಯಜಿಸಿದ್ದು, ಇದೀಗ ಸಂಪೂರ್ಣ ಭಾರತೀಯರಾಗಿದ್ದಾರೆ.

ಸ್ವಾತಂತ್ರ್ಯ ದಿನದಂದು ಅಕ್ಷಯ್ ಕುಮಾರ್ ಭಾರತೀಯ ಪೌರತ್ವ ಪಡೆದುಕೊಂಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೃದಯ ಮತ್ತು ಪೌರತ್ವ ಎರಡೂ ಭಾರತದ್ದೇ. ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಕೆನಡಾ ಪೌರತ್ವ ಹೊಂದಿರುವ ವಿಚಾರಕ್ಕೆ ಹಲವು ಬಾರಿ ಟೀಕೆಗೊಳಗಾಗಿದ್ದರು. 2019 ರಲ್ಲಿ ಭಾರತೀಯ ಪೌರತ್ವಕ್ಕಾಗಿ ಅಕ್ಷಯ್ ಅರ್ಜಿ ಸಲ್ಲಿಸಿದ್ದರು. ಕೊನೆಗೂ ಈಗ ಭಾರತೀಯನಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ