ವಿಂಗ್ ಕಮಾಂಡರ್ ಅಭಿನಂದನ್ ರನ್ನು ವರ್ಗಾವಣೆ ಮಾಡಿದ ವಾಯುಪಡೆ

ಭಾನುವಾರ, 21 ಏಪ್ರಿಲ್ 2019 (12:59 IST)
ನವದೆಹಲಿ : ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸುವ ಭರದಲ್ಲಿ , ಪಾಕಿಸ್ತಾನದ ವಶವಾಗಿ ಬಂಧನದಲ್ಲಿದ್ದು, ದೇಶಕ್ಕೆ ಮರಳಿದ ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.


ಆದರೆ ಅಭಿನಂದನ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಕಾಶ್ಮೀರ ಕಣಿವೆಯಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂಬುದನ್ನು ಅರಿತ ವಾಯುಪಡೆ ಅವರನ್ನು ಶ್ರೀನಗರ ವಾಯುನೆಲೆಯಿಂದ ದೇಶದ ಪಶ್ಚಿಮ ವಲಯದಲ್ಲಿ ಪಾಕಿಸ್ತಾನದ ಗಡಿಗೆ ಅಂಟಿಕೊಂಡಿರುವ, ಪ್ರಮುಖ ವಾಯುನೆಲೆಗೆ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ