ನೋಯಿಡಾ: ರಕ್ಷಾಬಂಧನ ಹಬ್ಬವನ್ನೇ ನೆಪವಾಗಿಸಿಕೊಂಡು ಜೈಲಿನಲ್ಲಿರುವ ತಮ್ಮ ಪತಿಯರನ್ನು ಭೇಟಿಯಾಗಲು ಕೆಲ ಮಹಿಳೆಯರು, ಸಹೋದರಿಯರ ವೇಷದಲ್ಲಿ ಬಂದ ಘಟನೆ ನಡೆದಿದೆ.
ಪತ್ನಿಯರನ್ನು ನೋಡುತ್ತಲೇ ಗಂಡಂದಿರು ಖುಷಿಯಿಂದ ಗಟ್ಟಿಯಾಗಿ ತಬ್ಬಿಕೊಂಡರು. ಇದರಿಂದ ಜೈಲಿನ ಅಧಿಕಾರಿಗಳಿಗೆ ಅನುಮಾನ ಬಂದು ಇವರು ರಾಖಿ ಕಟ್ಟಲು ಬಂದವರಲ್ಲ, ರಕ್ಷಾಬಂಧನದ ನೆಪವಾಗಿ ಪತಿಯರನ್ನು ಭೇಟಿಯಾಗಲು ಬಂದ ಪತ್ನಿಯರು ಎಂದು ತಿಳಿದು ಹೋಯಿತು. ತಕ್ಷಣವೇ ಪತ್ನಿಯರನ್ನು ಹೊರಗೆ ಕಳುಹಿಸಲಾಯಿತು.
ರಕ್ಷಾಬಂಧನದ ಹಿನ್ನೆಲೆ ಸಹೋದರ- ಸಹೋದರಿಯರ ಭೇಟಿಗೆ ಜೈಲು ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ