ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಆಪ್ತನಾಗಿರುವ ಶಾಸಕ ಗುರುಕ್ ಪೋರ್ದುಂಗ್ ಬಾಮೆಂಗ್ ನಲ್ಲಿರುವ ಆರೋಗ್ಯ ಕೇಂದ್ರಗಳ ಕೆಲಸದ ಬಗ್ಗೆ ಚರ್ಚಿಸಲೆಂದು ತನ್ನನ್ನು ಇಟಾನಗರದ ಹೋಟೆಲ್ ರೂಂಗೆ ಕರೆಸಿ ಅಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕರ ವಿರುದ್ಧ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಶಾಸಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಆದರೆ ಇದನ್ನು ಅಲ್ಲಗೆಳೆದ ಶಾಸಕ ಗುರುಕ್ ಪೋರ್ದುಂಗ್ ಮಹಿಳೆ ತಾನಾಗಿಯೇ ಹೊಟೇಲ್ ಗೆ ಬಂದು ನನ್ನ ಜೊತೆ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದು ಪ್ರತಿದೂರು ದಾಖಲಿಸಿದ್ದಾರೆ ಎನ್ನಲಾಗಿದೆ.