ಏಳು ಗಂಟೆಯ ಬಳಿಕ ಮಹಿಳೆಯರ ಬಳಿ ಕೆಲಸ ಮಾಡಿಸುವಂತಿಲ್ಲ!

ಸೋಮವಾರ, 30 ಮೇ 2022 (09:10 IST)
ಲಕ್ನೋ: ಸಂಜೆ 7 ಗಂಟೆಯ ಮೇಲೆ ಮಹಿಳಾ ಉದ್ಯೋಗಿಗಳನ್ನು ಕಚೇರಿಯಲ್ಲೇ ಕೂರಿಸಿಕೊಂಡು ಕೆಲ ಮಾಡಿಸುವಂತಿಲ್ಲ! ಇಂತಹದ್ದೊಂದು ಆದೇಶ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದೆ.

ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಬಲವಂತವಾಗಿ ಸಂಜೆ 7 ಗಂಟೆಯ ಬಳಿಕ ಮತ್ತು ಬೆಳಿಗ್ಗೆ 6 ಗಂಟೆಯೊಳಗೆ ಕಚೇರಿಯಲ್ಲಿರಲು ಹೇಳುವಂತಿಲ್ಲ.

ಒಂದು ವೇಳೆ ಮಹಿಳೆಯರೇ ಸ್ವಯಂಕೃತವಾಗಿ ಬಯಸಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ಮಾತ್ರ ಆಕೆಯಿಂದ ಲಿಖಿತ ಒಪ್ಪಿಗೆ ಪತ್ರ ಪಡೆದು, ಊಟೋಪಚಾರ ನೀಡಿ ಕೆಲಸ ಮಾಡಿಸಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕ್ರಮ ಕೈಗೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ