ಸಹೋದ್ಯೋಗಿಯಿಂದ ಪೊಲೀಸ್ ಮಹಿಳಾ ಪೇದೆ ಮೇಲೆ ಮಾನಭಂಗ

ಗುರುವಾರ, 28 ಜನವರಿ 2021 (10:01 IST)
ಲಕ್ನೋ: ಸಹೋದ್ಯೋಗಿಯಿಂದಲೇ ಮಹಿಳಾ ಪೊಲೀಸ್ ಪೇದೆ ಮೇಲೆ ಮಾನಭಂಗವಾಗಿದ್ದು, ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದು ಸಂತ್ರಸ್ತೆ ಸ್ವಯಂ ಹತ್ಯೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಕಳೆದ ಮೇ ತಿಂಗಳಲ್ಲಿ ಮೊದಲ ಬಾರಿಗೆ ಸಹೋದ್ಯೋಗಿ ಪೇದೆ ಈ ಕೃತ್ಯವೆಸಗಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಕಾಮತೃಷೆ ತೀರಿಸಿಕೊಂಡಿದ್ದ. ಆದರೆ ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾನೆ. ಇದರಿಂದ ಮನನೊಂದು ಸಂತ್ರಸ್ತೆ ವಿಷ ಸೇವಿಸಿ ಜೀವಕೊನೆಗಾಣಿಸಲು ಯತ್ನಿಸಿದ್ದಾಳೆ. ಇದೀಗ ಆರೋಪಿ ಪೇದೆ ಮೇಲೆ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ