ಕಸದಿಂದ ರಸ ತಯಾರಿಸಿ ಪ್ರಧಾನಿ ಮೋದಿಗೆ ಗಿಫ್ಟ್ ನೀಡಿದ ಮಹಿಳೆ!
ಗುರುವಾರ, 25 ಮೇ 2017 (09:50 IST)
ನವದೆಹಲಿ: ಸದಾ ಸ್ವಚ್ಛ ಭಾರತದ ಬಗ್ಗೆ ಸಂದೇಶ ನೀಡುವ ಪ್ರಧಾನಿ ಮೋದಿಗೆ ಬಿಹಾರದ ಮಹಿಳೆಯೊಬ್ಬರು ಕಸದಿಂದ ತಯಾರಿಸಿದ ಉಡುಗೊರೆ ನೀಡಿದ್ದಾರೆ.
50 ವರ್ಷದ ಗೀತಾ ದೇವಿ ಎಂಬ ಮಹಿಳೆ ಉಡುಗೊರೆ ಕಳುಹಿಸಿದಾಕೆ. ಪ್ಲಾಸ್ಟಿಕ್ ಮತ್ತಿತರ ಅನಪೇಕ್ಷಿತ ವಸ್ತುಗಳಿಂದ ಆಕೆ ಸುಂದರವಾದ ಬಾಸ್ಕೆಟ್ ತಯಾರಿಸಿದ್ದರು. ಇದನ್ನು ನೋಡಿದ ಆಕೆಯ ಪುತ್ರ ಮನೋಜ್ ಕುಮಾರ್ ಅಮ್ಮನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ನೀಡಲು ನಿರ್ಧರಿಸಿ ಇಂತಹದ್ದೊಂದು ಐಡಿಯಾ ನೀಡಿದನಂತೆ.
ಉಡುಗೊರೆ ಕಳುಹಿಸಿ ಸುಮ್ಮನಾಗಿದ್ದ ಗೀತಾ ದೇವಿಗೆ ಪ್ರಧಾನಿ ಸ್ವತಃ ಶಹಬ್ಬಾಶ್ ಗಿರಿ ಕೊಟ್ಟಿದ್ದು ನೋಡಿ ನಿಜಕ್ಕೂ ಅಚ್ಚರಿಗೊಳಗಾಗಿದ್ದಾರೆ. ನಿಮ್ಮಲ್ಲಿ ಸ್ವ ಉದ್ಯೋಗ ನಡೆಸುವ ಸಾಮರ್ಥ್ಯವೂ ಇದೆ ಎಂದು ಅವರು ಹೊಗಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ