ಹೈದರಾಬಾದ್: ಜಗತ್ತಿನಲ್ಲಿ ಏನೆಲ್ಲಾ ವಿಚಿತ್ರಗಳು ನಡೆಯುತ್ತವೆ ನೋಡಿ. ಆಂಧ್ರ ಪ್ರದೇಶದಲ್ಲೊಂದು ವಿಶೇಷ ಮಗು ಜನಿಸಿದೆ. ಅದರ ವಿಶೇಷತೆಯೇನೆಂದು ತಿಳಿಯಬೇಕಾದರೆ ಈ ಸುದ್ದಿ ಓದಿ.
ಆಂಧ್ರಪ್ರದೇಶದ ಕಾಕಿನಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ಇದು 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವಂತಹ ವಿಚಿತ್ರ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
ಹೊಟ್ಟೆಗೆ ಅಂಟಿಕೊಂಡಂತೆ ಈ ಮಗುವಿಗೆ ನಾಲ್ಕು ಕಾಲುಗಳಿವೆ ಎಂದು ವೈದ್ಯರು ಹೇಳಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೆ ಈ ವಿಚಿತ್ರ ಮಗುವನ್ನು ನೋಡಲು ಇದೀಗ ಆಸ್ಪತ್ರೆ ಮುಂದೆ ಜನ ಸಾಗರವೇ ಹರಿದುಬರುತ್ತಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ