ರೈಲ್ವೆ ಪ್ಲಾಟ್ ಫಾರಂ ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಗುರುವಾರ, 22 ಜೂನ್ 2017 (12:13 IST)
ಥಾಣೆ: ಗರ್ಭಿಣಿಯೋರ್ವರು ಪ್ರಸವ ವೇದನೆ ತಾಳಲಾರದೇ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೇ ಹೆರಿಗೆಯಾದ ಘಟನೆ ಥಾಣೆಯಲ್ಲಿ ನಡೆದಿದೆ.
 
ತುಂಬು ಗರ್ಭಿಣಿ ಮೀನಾಕ್ಷಿ ಜಾಧವ್‌ ತನ್ನ ಪತಿ ಸಂದೇಶ್‌ ಜಾಧವ್‌ ಅವರೊಂದಿಗೆ ಲೋಕಲ್‌ ಟ್ರೈನ್‌ ಮೂಲಕ ಘಟ್ಕೋಪರ್‌ನ ಆಸ್ಪತ್ರೆಗೆ ತೆರಳಲು ಫ್ಲಾಟ್‌ಫಾರಂ 10ಕ್ಕೆ ಬಂದಿದ್ದಾರೆ. ಆದರೆ, ರೈಲು ಬರುವ ಮುನ್ನವೇ ಮೀನಾಕ್ಷಿಗೆ ಹೆರಿಗೆ ನೋವು ಕಾಣಿಸಿದೆ. 
 
ಈ ವೇಳೆ ಪತಿ ಸಂದೇಶ್ ಅಸಹಾಯಕರಾಗಿದ್ದಾರೆ. ಅಷ್ಟರಲ್ಲಿ ರೈಲ್ವೇ ಪ್ರೊಟೆಕ್ಷನ್‌ ಫೋರ್ಸ್‌ ಅಧಿಕಾರಿ ಶೋಭಾ ಮೋತೆ ಮತ್ತಿತರ ಮಹಿಳೆಯರು ಮೀನಾಕ್ಷಿಗೆ ರಕ್ಷಣೆ ಒದಗಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮೀನಾಕ್ಷಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಧ್ಯ ತಾಯಿ ಮತ್ತು ಶಿಶುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯದಿಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ