ಪತಿಯನ್ನು ತೊರೆದು ಬಂದವಳಿಗೆ ಗತಿ ಕಾಣಿಸಿದ ಪ್ರಿಯಕರ

ಗುರುವಾರ, 21 ಡಿಸೆಂಬರ್ 2023 (13:53 IST)
ಕಳೆದ ಹಲವು ವರ್ಷಗಳ ಹಿಂದೆ ಪತಿಗೆ ವಿಚ್ಚೇದನ ನೀಡದೇ ಜ್ಯೋತಿ, ಪತ್ನಿ ಮತ್ತು ಐದು ಮಕ್ಕಳ ತಂದೆಯಾದ ಅಶೋಕ್‌ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಮೂಲಗಳು ತಿಳಿಸಿವೆ.
 
ಘಟನೆಯ ನಂತರ ಆರೋಪಿ ಅಶೋಕ್ ಪರಾರಿಯಾಗಿದ್ದು, ಹತ್ಯೆಯಾದ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಕೆಲ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಪ್ರಿಯಕರನೇ ಹತ್ಯೆಗೈದ ದಾರುಣ ಘಟನೆ ಬಾರ್‌ಮಾಸಿಯಾ ಪ್ರದೇಶದಲ್ಲಿ ವರದಿಯಾಗಿದೆ.
 
ಪತಿಯ ಮನೆಯಿಂದ ಓಡಿಹೋಗಿದ್ದ ಜ್ಯೋತಿ, ತನ್ನ ಪ್ರಿಯಕರ ಅಶೋಕ್‌ನೊಂದಿಗೆ ವಾಸಿಸುತ್ತಿದ್ದಳು. ಇಂದು ಕೆಲ ವೈಯಕ್ತಿಕ ಕಾರಣಗಳಿಗಾಗಿ ಪರಸ್ಪರರಲ್ಲಿ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಆರೋಪಿ ಅಶೋಕ್, ಹರಿತವಾದ ಆಯುಧದಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
 
ಆರೋಪಿ ಅಶೋಕ್ ಬಂಧನಕ್ಕೆ ಜಾಲ ಬೀಸಲಾಗಿದ್ದು, ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ