ಮೂಗ-ಕಿವುಡ ಮಹಿಳೆಯ ಮೇಲೆ ಪೊಲೀಸ್ ಹೋಂ ಗಾರ್ಡ್ ನಿಂದಲೇ ಅತ್ಯಾಚಾರ

ಗುರುವಾರ, 7 ಫೆಬ್ರವರಿ 2019 (05:19 IST)
ಉತ್ತರ ಪ್ರದೇಶ : 35 ವರ್ಷದ ಮೂಗ-ಕಿವುಡ ಮಹಿಳೆಯೊಬ್ಬಳ ಮೇಲೆ ಪೊಲೀಸ್ ಹೋಂ ಗಾರ್ಡ್ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಜನವರಿ 29 ರಂದು ಸಂತ್ರಸ್ತ ಮಹಿಳೆ ಮನೆಯ ಹೊರಗೆ ಮಲಗಿದ್ದಾಗ ಪೊಲೀಸ್ ಹೋಂ ಗಾರ್ಡ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ವೇಳೆ ಮಹಿಳೆಯ 13 ವರ್ಷದ ಮಗ ತಾಯಿಯ ರಕ್ಷಣೆಗೆ ಬಂದಾಗ ಮಗನ ಮೇಲೆಯೂ ಆರೋಪಿ ಹಲ್ಲೆ ನಡೆಸಿದ್ದಾನೆ.

 

ಘಟನೆಯ ಬಳಿಕ ಸಂತ್ರಸ್ತ ಮಹಿಳೆ ತನ್ನ ಭಾಷೆಯ ಮೂಲಕ  ಅಕ್ಕ-ಪಕ್ಕದವರಿಗೆ ಹಾಗೂ ಸಹೋದರನಿಗೆ ವಿಷಯ ತಿಳಿಸಿದ್ದು, ನಂತರ ಪೀಡಿತೆ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ