ಸ್ಮಶಾನ ಕಾಯುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ ಯುವಕರಿಂದ ಗ್ಯಾಂಗ್ ರೇಪ್

ಮಂಗಳವಾರ, 5 ಫೆಬ್ರವರಿ 2019 (09:27 IST)
ಬೆಂಗಳೂರು : ಸ್ಮಶಾನದ ಗೇಟ್ ಕಾಯುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ ಯುವಕರ ಗ್ಯಾಂಗ್ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಎನ್‍ ಜಿಆರ್ ಲೇಔಟ್‍ನಲ್ಲಿ ನಡೆದಿದೆ.


ಯಲ್ಲಮ್ಮ (80) ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ. ಎನ್‍ ಜಿಆರ್ ಬಡಾವಣೆಯ ಸ್ಮಶಾನ ಕಾಯುವ ಕೆಲಸ ಮಾಡುತ್ತಿದ್ದ ಯಲ್ಲಮ್ಮ ಅಲ್ಲಿನ ರೂಮ್ ಒಂದರಲ್ಲಿ ವಾಸವಾಗಿದ್ದರು. ಈ ವಿಚಾರ ತಿಳಿದ ಯುವಕರ ಗ್ಯಾಂಗ್ ವೊಂದು ಶನಿವಾರ ಸಂಜೆ ಯಲ್ಲಮ್ಮ ವಾಸವಿದ್ದ ರೂಮ್‍ಗೆ ಹೋಗಿ ಆಕೆಯ ಮುಖಕ್ಕೆ ಕಟ್ಟಿಗೆಯಿಂದ ಹೊಡೆದು, ಎದೆ ಭಾಗವನ್ನು ಕಚ್ಚಿ, ಗುಪ್ತಾಂಗಕ್ಕೂ ಗಾಯ ಮಾಡಿ ಅತ್ಯಾಚಾರ ಎಸಗಿದ್ದಾರೆ.


ರೂಮಿನೊಳಗೆ ಯಲ್ಲಮ್ಮ ಕಿರುಚಾಡುತ್ತಿರುವುದನ್ನು ಕೇಳಿ ಅಲ್ಲೇ ಇದ್ದ ಮಹಿಳೆಯೊಬ್ಬಳು ಬಂದು ನೋಡಿದಾಗ ಯಲ್ಲಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ತಕ್ಷಣ ಸ್ಥಳೀಯರಿಗೆ ಹಾಗೂ ವೃದ್ಧೆಯ ಮಗಳಿಗೆ ವಿಷಯ ಮುಟ್ಟಿಸಿದ್ದಾಳೆ. ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿ ತಕ್ಷಣ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.


ಈ ಕುರಿತು ಮೃತ ವೃದ್ಧೆಯ ಸಂಬಂಧಿಕರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಹರೀಶ್‍ ಎಂಬಾತನನ್ನು ವಶಕ್ಕೆ ಪಡೆದು, ಇತರರಿಗಾಗಿ ಶೋಧ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ