ಮಹಿಳೆಯನ್ನು ಕೆಣಕಿ ಚಪ್ಪಲಿ ಏಟು ತಿಂದ ಬಿಜೆಪಿ ಮುಖಂಡ

ಸೋಮವಾರ, 24 ಅಕ್ಟೋಬರ್ 2016 (15:28 IST)
ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ ಅಶ್ಲೀಲ ಭಾಷೆಗಳನ್ನು ಬಳಸಿದ ಬಿಜೆಪಿ ಮುಖಂಡನನ್ನು ಜನನಿಬಿಡ ಮಾರುಕಟ್ಟೆಯಲ್ಲಿಯೇ ಚಪ್ಪಲಿಯಿಂದ ಬಾರಿಸಿದ ಘಟನೆ ವರದಿಯಾಗಿದೆ.
 
ಬಿಜೆಪಿ ಮುಖಂಡ ಸಿಂಹಾಶನ್ ಪ್ರಸಾದ್ ಗುಪ್ತಾ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಕೋಪಗೊಂಡ ಮಹಿಳೆ ಆತನನ್ನು ಜನನಿಬಿಡ ಮಾರುಕಟ್ಟೆಯಲ್ಲಿ ಗುಪ್ತಾಗೆ ಚಪ್ಪಲಿಯಿಂದ ಬಾರಿಸಿದ್ದಾಳೆ. ಸುತ್ತುವರಿದಿದ್ದ ಜನರು ಕೂಡಾ ಥಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಗಂಭೀರವಾಗಿ ಗಾಯಗೊಂಡ ಬಿಜೆಪಿ ಮುಖಂಡನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
 
ಮಹಿಳೆಯನ್ನು ಶಿಖಾ ಎಂದು ಗುರುತಿಸಲಾಗಿದೆ. ಬಿಜೆಪಿ ಮುಖಂಡ ಮೊದಲು ನನ್ನ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸಿದ ನಂತರ ನನ್ನ ಕಾರಿನ ಕೀ ಕಿತ್ತುಕೊಳ್ಳಲು ಬಂದ. ಸ್ವರಕ್ಷಣೆಗಾಗಿ ಆತನ ಮೇಲೆ ಹಲ್ಲೆ ಮಾಡಿದ್ದೇನೆ. ಅದರಲ್ಲಿ ನನಗೆ ಪಶ್ಚಾತಾಪವಿಲ್ಲ ಎಂದು ಶಿಖಾ ಹೇಳಿದ್ದಾರೆ. 
 
ಬೇಟಿ ಬಚಾವೋ ಎಂದು ಘೋಷಣೆಗಳನ್ನು ಉದುರಿಸುವ ಬಿಜೆಪಿ ನಾಯಕರೇ ಮಹಿಳೆಯರ ವಿರುದ್ಧ ಕೀಳು ವರ್ತನೆ ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ