ಇಲಿಯಾಸ್ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದರಿಂದ ಆಕ್ರೋಶಗೊಂಡ ಹಿಮಾ, ಇಲಿಯಾಸ್‌ನನ್ನು ಭೇಟಿಯಾಗುವಂತೆ ಕೋರಿದ್ದಾಳೆ. ಪ್ರಿಯಕರನ ವಂಚನೆಯಿಂದ ಆಕ್ರೋಶಗೊಂಡಿದ್ದ ಆಕೆ ಭೇಟಿಯಾಗಲು ಬಂದ ಇಲಿಯಾಸ್ ಮುಖದ ಮೇಲೆ ಆಸಿಡ್ ಎರಚಿದ್ದಾಳೆ. ಕಾಕನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಹೀಮಾ ಬಿಂದು ಪರಾರಿಯಾಗಿದ್ದಾಳೆ.
ಇಲಿಯಾಸ್ ವಿವಾಹವಾಗುವ ಒಂದು ದಿನ ಮುಂಚೆ ಹೀಮಾ , ಇಲಿಯಾಸ್ ಸಹೋದರ ಅಲ್ಲಾಭಕ್ಷುನನ್ನು ಭೇಟಿಯಾಗಿ ತಮ್ಮ ಸಂಬಂಧವನ್ನು ವಿವರಿಸಿ ತನ್ನ ಭವಿಷ್ಯದ ಬಗ್ಗೆ ಪ್ರಶ್ನಿಸುವವರೆಗೂ ನಮಗೆ ಇಬ್ಬರ ನಡುವಿನ ಸಂಬಂಧ ತಿಳಿದಿರಲಿಲ್ಲ ಎಂದು ಇಲಿಯಾಸ್ ಪೋಷಕರು ತಿಳಿಸಿದ್ಜಾರೆ.
ಇಲಿಯಾಸ್ ವಿವಾಹ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಅಡ್ಡಿಪಡಿಸದಂತೆ ಹೀಮಾಳಿಗೆ ಮನವಿ ಮಾಡಿದ್ದೆ. ವಿವಾಹದ ದಿನದಂದು ಆಕೆ ಯಾವುದೇ ಕರೆ ಮಾಡುವುದಾಗಲಿ ಅಥವಾ ಅಡ್ಡಿಯಾಗುವುದಾಗಲಿ ಮಾಡಲಿಲ್ಲ. ಆದರೆ, ವಿವಾಹದ ಮಾರನೇ ದಿನವೇ ಇಲಿಯಾಸ್ ಮೇಲೆ ಆಸಿಡ್ ಎರಚಿ ಸೇಡು ತೀರಿಸಿಕೊಂಡು ನವವಧುವನ್ನು ವಿಧುವೆಯಾಗಿಸಿದ್ದಾಳೆ ಎಂದು ಇಲಿಯಾಸ್ ಸಹೋದರ ಮೆಕ್ಯಾನಿಕ್ ಅಲ್ಲಾಭಕ್ಷ್ ತಿಳಿಸಿದ್ದಾನೆ.