ಎಸ್ಕೇಪ್ ಆಗಲು ಸೀರೆ ಇಳಿಬಿಟ್ಟ ಪ್ರಿಯಕರ: ಹುಡುಗಿ ಸ್ಥಿತಿ ಗಂಭೀರ
ಮುಂಬೈನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಗೆಳೆಯನ ಜೊತೆ ಮಾತನಾಡುವಾಗ ಯುವತಿ ಪೋಷಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದರಿಂಬ ಭಯಗೊಂಡ ಆಕೆ ಕಿಟಿಕಿಗೆ ಸೀರೆ ಕಟ್ಟಿ ಅಲ್ಲಿಂದ ಪ್ರಿಯಕರನ ಸಹಾಯದಿಂದ ಇಳಿಯಲು ಯತ್ನಿಸುತ್ತಾಳೆ.
ಈ ವೇಳೆ ಆರನೇ ಮಹಡಿಯಿಂದ ಬಿದ್ದ ಯುವತಿ ಗಂಭೀರ ಗಾಯಗೊಂಡಿದ್ದಾಳೆ. ಇದೀಗ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.