ಯೂ ಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಸಿದ ಪತಿ ಪೊಲೀಸರ ಅತಿಥಿ
ಮಗು ಸಾವನ್ನಪ್ಪಿದ್ದರೆ, ಪತ್ನಿ ತೀವ್ರ ರಕ್ತಸ್ರಾವದಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇದೀಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿಗೆ ಹೆರಿಗೆ ನೋವು ಬಂದಾಗ ಆಸ್ಪತ್ರೆಗೆ ಕರೆದೊಯ್ಯದ ಪತಿ ಸಹೋದರಿಯ ಸಹಾಯದಿಂದ ಯೂ ಟ್ಯೂಬ್ ನೋಡಿಕೊಂಡು ಮನೆಯಲ್ಲೇ ಹೆರಿಗೆ ಮಾಡಿಸಿದ್ದಾನೆ. ಆದರೆ ಮಗು ಹುಟ್ಟುತ್ತಲೇ ಸಾವನ್ನಪ್ಪಿದೆ. ಇತ್ತ ಮಹಿಳೆಗೆ ತೀವ್ರ ರಕ್ತಸ್ರಾವವಾಗಲು ಆರಂಭವಾಗಿದೆ. ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾನೆ. ಇಲ್ಲಿ ಸಾಧ‍್ಯವಾಗದು ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು.