ಪರೀಕ್ಷೆ ಬರೆಯಲು ತಾಳಿ ಸರ ಕಿತ್ತು ಹಾಕಲು ಹೇಳಿದ್ದಕ್ಕೆ ಪತಿ ಪ್ರತಿಭಟನೆ
ಪರೀಕ್ಷೆ ಬರೆಯುವ ಮೊದಲು ವಿವಾಹಿತ ಮಹಿಳೆಯರು ತಮ್ಮ ತಾಳಿ ಸರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂದು ಪರೀಕ್ಷಕರು ಸೂಚಿಸಿದ್ದರು. ತಾಳಿ ಸರದೊಳಗೆ ಕಾಪಿ ಹೊಡೆಯಲು ಸಹಾಯ ಮಾಡಬಹುದಾದ ಎಲೆಕ್ಟ್ರಾನಿಕ್ ವಸ್ತುವನ್ನು ಅಳವಡಿಸಬಹುದು ಎಂಬ ಉದ್ದೇಶದಿಂದ ಈ ರೀತಿ ಆದೇಶಿಸಲಾಗಿತ್ತು.
ಆದರೆ ಮಹಿಳೆ ಇದು ಮಂಗಳಸೂತ್ರ ತೆಗೆಯುವುದು ಹಿಂದೂ ಸಂಸ್ಕೃತಿಗೆ ವಿರುದ್ಧವಾದುದು ಎಂದು ಪರೀಕ್ಷಕರಿಗೆ ಮನವರಿಕೆ ಮಾಡಲು ಯತ್ನಿಸದರೂ ಅವರು ಕಿವಿಗೊಡಲಿಲ್ಲ. ಇದರಿಂದ ನೊಂದ ಪತಿ ಪರೀಕ್ಷಾ ಕೇಂದ್ರದ ಹೊರಗೆ ಭಾರೀ ಕೂಗಾಟ ನಡೆಸಿದ್ದರು. ನಂತರ ಈ ವಿಷಯ ಪೊಲೀಸರ ಗಮನಕ್ಕೂ ಬಂತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಗೆ ತಾಳಿ ಸರ ಸಮೇತ ಪರೀಕ್ಷೆ ಬರೆಯಲು ಅನುಮತಿ ಕೊಟ್ಟರು.