ಓಡಿ ಹೋಗಿ ಕೂಡುತ್ತಿದೆ ಈ ಜೋಡಿ; ಆದರಿದು ಪ್ರೇಮ ವಿವಾಹವಲ್ಲ

ಶುಕ್ರವಾರ, 3 ಫೆಬ್ರವರಿ 2017 (11:33 IST)
ಸಮುದ್ರದ ಆಳದಲ್ಲಿ, ಆಗಸದಲ್ಲಿ ಹಾರಾಡುತ್ತ, ಆನ್ಲೈನ್‌ನಲ್ಲಿ... ಹೀಗೆ ವಿಶಿಷ್ಠವಾಗಿ ಮದುವೆಯಾಗಿರುವುದರ ಬಗ್ಗೆ ಕೇಳಿರುತ್ತೀರಾ. ಆದರೆ ಇದು ಇದೆಲ್ಲಕ್ಕಿಂತ ವಿಭಿನ್ನವಾದ ಮದುವೆ. ಈ ಜೋಡಿ ಓಡಿ ಹೋಗಿ ಮದುವೆಯಾಗುತ್ತಿದೆ.  ಅದಕ್ಕೆ ಪೋಷಕರ ವಿರೋಧ ಕಾರಣವಲ್ಲ.  ಹಿರಿಯರು ಒಪ್ಪಿಕೊಂಡು ಆಯೋಜಿಸಿರುವ ಮದುವೆ ಇದು. ಇದೇನಿದು ಹೀಗೆ ಎನ್ನುತ್ತೀರಾ? ಈ ಅಪರೂಪದ ಮದುವೆ ಕಥೆಯನ್ನು ನೀವೇ ಓದಿ.

 
ಮಹಾರಾಷ್ಟ್ರದ ಸತಾರ ಜಿಲ್ಲೆಯ ಜಾವಿಲ್ ತೆಹ್ಸಿಲ್ ನಿವಾಸಿಗಳಾದ ನವನಾಥ್ ಹಾಗೂ ಪೂನಂ ಎಂಬುವವರೇ ವಿಭಿನ್ನ ರೀತಿಯಲ್ಲಿ ವಿವಾಹ ಬಂಧನಕ್ಕೆ ಒಳಗಾಗುತ್ತಿರುವವರು. ವಧು ಮತ್ತು ವರ ಇಬ್ಬರು ಮ್ಯಾರಥಾನ್ ಓಟಗಾರರಾಗಿದ್ದು ತಮ್ಮಿಬ್ಬರ ಹೊಸ ಜೀವನವನ್ನು ವಿನೂತನವಾಗಿ ಆರಂಭಿಸುವ ಆಕಾಂಕ್ಷೆ ಇವರದು. ಹೀಗಾಗಿ 25 ಕೀಲೋಮೀಟರ್ ಓಡಿಕೊಂಡು ವಿವಾಹ ನೋಂದಣಿ ಕಚೇರಿಗೆ ಹೋಗಲಿದ್ದಾರೆ. 
 
ನಮ್ಮೊಂದಿಗೆ ಮ್ಯಾರಥಾನ್‌ನಲ್ಲಿ ಓಡುವ ಮೂಲಕ ಆಶೀರ್ವಾದ ನೀಡಿ ಎಂದು ತಮ್ಮೆಲ್ಲ ಬಂಧುಬಳಗ, ಸ್ನೇಹಿತರಲ್ಲೂ ಅವರು ಕೇಳಿಕೊಂಡಿದ್ದಾರೆ.
 
ಇಂದು ಅವರ ಮದುವೆ ನಡೆಯುತ್ತಿದ್ದು, ವಿವಾಹದ ಸ್ಥಳ ಹಾಗೂ ಮ್ಯಾರಥಾನ್ ಪ್ರಾರಂಭವಾಗುವ ಸ್ಥಳದ, ಸಮಯದ ಮಾಹಿತಿಯನ್ನು ಕರೆಯೋಲೆಯಲ್ಲಿಯೇ ನಮೂದಿಸಲಾಗಿದೆ. 
 
ಇನ್ನು ಈ ಮದುವೆಯ ಮ್ಯಾರಾಥಾನ್‌ನಲ್ಲಿ ನೂತನ ವಧು-ವರರನ್ನು ಆಶೀರ್ವದಿಸಲು ಮುಖ್ಯ ಅತಿಥಿಗಳಾಗಿ ಅಲ್ಲಿನ ಡಿಸಿ ಅಶ್ವಿನ್‌ ಮುದ್ಗಲ್‌ ಹಾಗೂ ಎಸ್‌ಪಿ ಸಂದೀಪ್‌ ಪಾಟೀಲ್‌ ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.   
 
ಜಿಲ್ಲಾಧಿಕಾರಿ ಅಶ್ವಿನ್ ಮುದ್ಗಲ್ ಮತ್ತು ಪೊಲೀಸ್ ಅಧೀಕ್ಷಕ ಸಂದೀಪ್ ಪಾಟೀಲ್ ಅವರನ್ನು ಮ್ಯಾರಥಾನ್ ಮದುವೆಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ