ಯೆಸ್ ಬ್ಯಾಂಕ್ ಹಗರಣ: ಪ್ರಿಯಾಂಕ ವಾದ್ರಾ ವಿಚಾರಣೆ ಸಾಧ್ಯತೆ
ಬುಧವಾರ, 11 ಮಾರ್ಚ್ 2020 (10:30 IST)
ನವದೆಹಲಿ: ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಯೆಸ್ ಬ್ಯಾಂಕ್ ಸಹಸಂಸ್ಥಾಪಕ ರಾಣಾ ಕಪೂರ್ ಪ್ರಿಯಾಂಕರಿಂದ 2 ಕೋಟಿ ರೂ. ಮೌಲ್ಯದ ಎಂ.ಎಫ್ ಹುಸೇನ್ ರಚಿಸಿದ್ದ ರಾಜೀವ್ ಗಾಂಧಿ ಕಲಾಕೃತಿಯೊಂದನ್ನು ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದರು. ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ ರಾಜೀವ್ ಚಿತ್ರವನ್ನು ಖರೀದಿಸಲು ಬಲವಂತ ಮಾಡಿದ್ದರು. ಹೀಗಾಗಿ ಒಪ್ಪಿಕೊಳ್ಳಬೇಕಾಯಿತು.
ಈ 2 ಕೋಟಿ ಮೊತ್ತವನ್ನು ಪ್ರಿಯಾಂಕ ಶಿಮ್ಲಾದಲ್ಲಿರುವ ಕಾಟೇಜ್ ಗೆ ಬಳಸಿದ್ದಾರೆ ಎಂದು ರಾಣಾ ಕಪೂರ್ ಹೇಳಿಕೆ ನೀಡಿದ್ದರು. ಹೀಗಾಗಿ ಈಗ ಪ್ರಿಯಾಂಕರನ್ನೂ ಇಡಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.