ಮುಸ್ಲಿಂ ಮಹಿಳೆಯರು ಹಕ್ಕುಗಳಿಗಾಗಿ ಹೋರಾಡಲಿ: ಯೋಗಿ ಆದಿತ್ಯನಾಥ್

ಶನಿವಾರ, 1 ಜುಲೈ 2017 (16:02 IST)
ತ್ರಿವಳಿ ತಲಾಕ್ ಸಾಮಾಜಿಕ ಸಮಸ್ಯೆಯಾಗಿದ್ದು ಮುಸ್ಲಿಂ ಸಮುದಾಯವೇ ಸಮಸ್ಯೆಯನ್ನು ಪರಿಹರಿಸುವುದು ಸೂಕ್ತ ಎಂದು 100 ದಿನಗಳ ಅಡಳಿತವನ್ನು ಪೂರೈಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
 
ಮುಸ್ಲಿಂ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಮುಂದೆ ಬರಬೇಕು. ಗಂಡು ಮತ್ತು ಹೆಣ್ಣಿನ ಸಮಾನುಪಾದಲ್ಲಿ ಕಡಿಮೆಯಾಗಬೇಕು ಎಂದು ತಿಳಿಸಿದ್ದಾರೆ.
 
ಸೆಂಟ್ರಲ್ ವಖ್ಫ್ ಬೋರ್ಡ್‌ ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದು, ಸಲಹೆಗಳನ್ನು ಸರಕಾರ ಜಾರಿಗೊಳಿಸಲು ಸಿದ್ದವಿದೆ. ಮುಖ್ಯಮಂತ್ರಿಯಾಗಿ 100 ದಿನಗಳ ಅಡಳಿತ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.
 
ಯಾವುದೇ ಜಾತಿಯ ಬಗ್ಗೆ ತಾರತಮ್ಯ ತೋರದೆ ಎಲ್ಲಾ ವರ್ಗಗಳ ಸಮಾಜದ ಏಳಿಗೆಗಾಗಿ ಸರಕಾರ ಕಾರ್ಯನಿರ್ವಹಿಸಲು ಬದ್ಧವಾಗಿದೆ. ಕೇವಲ 100 ದಿನಗಳಲ್ಲಿ ಪ್ರತಿಯೊಂದು ಸಮಸ್ಯೆ ಈಡೇರಿಸಲು ಸಾಧ್ಯವಿಲ್ಲ ಎಂದರು. 
 
ಬಿಜೆಪಿ ಸರಕಾರ ಐದು ವರ್ಷದ ಅಧಿಕಾರವಧಿಯಲ್ಲಿ ಉತ್ತರಪ್ರದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ