ತನ್ನನ್ನು ವಿವಾಹವಾಗಲು ಒಪ್ಪಿಕೊಂಡ ಹುಡುಗಿಯರಿಗೆ ಭಾವನಾತ್ಮಕ ಬ್ಲಾಕ್ಮೇಲ್ ಮಾಡಿದ ಆತ, ಆರೋಗ್ಯ ಸರಿಯಿಲ್ಲ ಎಂಬ ನೆಪ ಹೇಳಿ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಹೇಳಿ ಅನಾಯಾಸವಾಗಿ ಹಣ ದೋಚಿದ. ಆರೋಪಿಯನ್ನು ಸೈಬರ್ ಪೋಲಿಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ವಂಚನೆ ಮಾಡಲು ವ್ಯಕ್ತಿಯೊಬ್ಬ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾನೆನ್ನುವುದಕ್ಕೆ ಉದಾರಣೆಯಾಗಿ ಒಂದು ವಿಲಕ್ಷಣ ಘಟನೆಯೊಂದು ವರದಿಯಾಗಿದ್ದು, ಮುಂಬಯಿಯ ಕಿರಣ್ ಬಾಗ್ವೆ ಎಂಬ ಯುವಕನೊಬ್ಬ ಮದುವೆಯ ಆಮಿಷ ಒಡ್ಡಿ ಸಾವಿರಕ್ಕಿಂತ ಹೆಚ್ಚು ಹುಡುಗಿಯರಿಗೆ ಮೋಸ ಮಾಡಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಒಂದು ದಿನ ಆಕೆಗೆ ತಾನು ಗಂಭೀರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಸಂದೇಶ ಕಳುಹಿಸಿದ. ಆಕೆ ಅದನ್ನು ನಂಬಿದಳು. ಚಿಕಿತ್ಸೆಯ ನೆಪದಲ್ಲಿ ಆತ ಆಕೆಯಿಂದ ಸ್ವಲ್ಪ,ಸ್ವಲ್ಪ ಎಂದು 1 ಲಕ್ಷ, 57 ಸಾವಿರ ಹಣವನ್ನು ಲಪಟಾಯಿಸುವಲ್ಲಿ ಯಶಸ್ವಿಯಾದ.