ಮುಸ್ಲಿಂ ಯುವತಿಯರು ಐಬ್ರೋ ಮಾಡುವಂತಿಲ್ಲ : ಹಜರತ್ ಫತ್ವಾ

ಮಂಗಳವಾರ, 7 ಮಾರ್ಚ್ 2023 (10:38 IST)
ಲಕ್ನೋ : ಮುಸ್ಲಿಂ ಯುವತಿಯರು ಐಬ್ರೋ ಮಾಡಬಾರದು ಎಂದು ಉತ್ತರ ಪ್ರದೇಶದ ದರ್ಗಾ ಅಲಾ ಹಜರತ್ ಫತ್ವಾ ಹೊರಡಿಸಿದೆ.
 
ಮುಸ್ಲಿಂ ಯುವಕರು ತಮ್ಮ ಗುರುತನ್ನು ಮರೆ ಮಾಚುವ ಮತ್ತು ಮಸ್ಲಿಮೇತರ ಹುಡುಗಿಯರನ್ನು ಮಾದುವೆಯಾಗಬಾರದು ಎಂದು ಇನ್ನೊಂದು ಫತ್ವಾ ಹೊರಡಿಸಿದೆ.

ಪುರುಷರು ಕೂದಲು ಕಸಿ ಮಾಡುವುದು ಹಾಗೂ ಮಹಿಳೆಯರು ತಮ್ಮ ಹುಬ್ಬುಗಳಿಗೆ ಆಕಾರ ನೀಡುವುದು ಷರಿಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ದಾರುಲ್ ಇಫ್ತಾ ಸಂಸ್ಥೆಯು ಹೊರಡಿಸಿದ ಈ ಫತ್ವಾದಲ್ಲಿ ಮುಸ್ಲಿಂ ಯುವಕರು ತಮ್ಮ ಗುರುತನ್ನು ಮರೆಮಾಚಿ ಅನ್ಯಧರ್ಮದ ಹುಡುಗಿಯರ ಪ್ರೀತಿಯಲ್ಲಿ ಬೀಳುವುದು ‘ಹರಾಮ್’ ಎಂದು ಹೇಳಿದೆ. 

ಮುಸ್ಲಿಂ ಯುವಕರು ಇಸ್ಲಾಮೇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಅನ್ಯ ಧರ್ಮದ ಯುವತಿಯರೊಂದಿಗೆ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯಾಗುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬರೇಲಿಯಿಂದ ಫತ್ವಾವನ್ನು ಹೊರಡಿಸಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನ ಶಹಾಬುದ್ದಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ