ಮಂಡಿನೋವು ಸಮಸ್ಯೆಗೆ ಈ ಹಣ್ಣಿನ ಬೀಜದಲ್ಲಿದೆ ಪರಿಹಾರ

ಬುಧವಾರ, 13 ಮಾರ್ಚ್ 2019 (07:13 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಂಡಿನೋವಿನಿಂದ ನರಳುತ್ತಿರುತ್ತಾರೆ. ಇದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಮನೆಮದ್ದಿನಿಂದ ಪರಿಹಾರ ಕಂಡುಕೊಳ್ಳಬಹುದು. ಒಂದು ಹಣ್ಣಿನ ಬೀಜದಿಂದ ಈ ಸಮಸ್ಯೆಯನ್ನು ನಿವಾರಿಸಕೊಳ್ಳಬಹುದು.

ಹೌದು. ಹುಣಸೆ ಹಣ್ಣಿನ ಬೀಜದಿಂದ ಮಂಡಿನೋವನ್ನು ದೂರಮಾಡಬಹುದು. ಹುಣಸೆ ಹಣ್ಣಿನ ಬೀಜವನ್ನು ತೆಗೆದುಕೊಂಡು ಅದನ್ನು ಸ್ವಚ್ಚ ಮಾಡಿಕೊಂಡು ಒಂದು ಬಾಣಲೆಯಲ್ಲಿ ಹುರಿಯಿರಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಹುರಿದ ಬೀಜವನ್ನು ಹಾಕಿ 2 ದಿನಗಳ ಕಾಲ ನೆನೆಸಿಡಬೇಕು. ನಂತರ ಅದರ ಮೇಲಿರುವ ಸಿಪ್ಪೆಯನ್ನು ತೆಗೆದು ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಬಾಣಲೆಯಲ್ಲಿ ಹುರಿದು ನೈಸ್ ಪೌಡರ್ ಮಾಡಿಟ್ಟುಕೊಳ್ಳಿ.

 

ಪ್ರತಿದಿನ ಒಂದು ಗ್ಲಾಸ್ ನೀರಿಗೆ ½ ಚಮಚ ಹುಣಸೆ ಹಣ್ಣಿನ ಬೀಜದ ಪುಡಿ ಹಾಗೂ ½ ಚಮಚ  ಕಲ್ಲುಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಇದನ್ನು ಪ್ರತಿದಿನ 2-3 ಸಲ ಮಾಡಬೇಕು. ಹೀಗೆ 1 ತಿಂಗಳು ಮಾಡಿದರೆ ನಿಮ್ಮ ಮಂಡಿನೋವು ಸಮಸ್ಯೆಯ ಜೊತೆಗೆ ಬೆನ್ನ ನೋವು, ಕೀಲು ನೋವು ಮುಂತಾದ ಸಮಸ್ಯೆಯು  ದೂರವಾಗುತ್ತದೆ.    
 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ