ವರ್ಕ್ ಫ್ರಂ ಹೋಂ ಒತ್ತಡ ತಾಳಲಾರದೇ ಯುವಕ ಮಾಡಿದ್ದೇನು?

ಬುಧವಾರ, 21 ಅಕ್ಟೋಬರ್ 2020 (09:53 IST)
ಅಹಮ್ಮದಾಬಾದ್: ಲಾಕ್ ಡೌನ್ ಬಳಿಕ ಕೆಲವು ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿದೆ. ಆದರೆ ವರ್ಕ್ ಫ್ರಂ ಹೋಂ ಒತ್ತಡ ತಾಳಲಾರದೇ ಯವಕನೊಬ್ಬ ನೇಣಿಗೆ ಶರಣಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.


23 ವರ್ಷದ ಇಂಜಿನಿಯರ್ ನೌಕರ ಈ ಕೃತ್ಯವೆಸಗಿದ್ದಾನೆ. ನೋಯ್ಡಾ ಮೂಲದ ಕಂಪನಿಯೊಂದರಲ್ಲಿ ಈತ ಇಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆಯಲ್ಲಿದ್ದ. ಲಾಕ್ ಡೌನ್ ಬಳಿಕ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಆದರೆ ವೃತ್ತಿರಂಗದ ಒತ್ತಡದ ಬಗ್ಗೆ ಪದೇ ಪದೇ ಹೇಳುತ್ತಿದ್ದ. ಬಹುಶಃ ಆತನ ಸಾವಿಗೆ ಇದೇ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ