ಗೆಳೆಯನಿಗೆ ಸಹಾಯ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಸೋಮವಾರ, 1 ಮಾರ್ಚ್ 2021 (09:27 IST)
ರಾಜ್ ಕೋಟ್: ಗೆಳೆಯನಿಗೆ ಪ್ರೇಯಸಿ ಜೊತೆ ಓಡಿ ಹೋಗಲು ಸಹಾಯ ಮಾಡಿದ್ದಕ್ಕೆ 22 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.


ಗುಜರಾತ್ ನಲ್ಲಿ ಈ ಘಟನೆ ನಡೆದಿದೆ ಯುವತಿಯ ಮನೆಯವರೇ ಈ ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ. ಗೆಳೆಯನಿಗೆ ಸಹಾಯ ಮಾಡಿದ ಬಳಿಕ ಸಂತ್ರಸ್ತ ಯುವಕ ಸೋಷಿಯಲ್ ಮೀಡಿಯಾದಲ್ಲಿ ಜಾತಿ ವಿಚಾರವಾಗಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ಇದರ ಬೆನ್ನಲ್ಲೇ ಆತನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ