ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ್ದಕ್ಕೆ ಅತ್ಯಾಚಾರದ ಶಿಕ್ಷೆ!
ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವತಿಗೆ ತಾನು ಶ್ರೀಮಂತ ಉದ್ಯಮಿಯ ಪುತ್ರ ಎಂದು ಫೇಕ್ ಐಡಿ ಮಾಡಿಕೊಂಡಿದ್ದ ಆರೋಪಿ ಸುಮಾರು 6 ಲಕ್ಷ ರೂ.ಗಳ ಹಣ ವಸೂಲಿ ಮಾಡಿದ್ದ. ಆತನ ವಂಚನೆ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಯುವತಿ ಅನ್ ಫ್ರೆಂಡ್ ಮಾಡಿದ್ದಳು.
ಇದರಿಂದ ಆಕ್ರೋಶಗೊಂಡ ಆತ ಆಕೆಯನ್ನು ಹೋಟೆಲ್ ಒಂದಕ್ಕೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಕೃತ್ಯದ ವಿಡಿಯೋ ಮಾಡಿಕೊಂಡು 7.5 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದ. ಕೊನೆಗೆ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.