ಗರ್ಲ್ ಫ್ರೆಂಡ್ ಖುಷಿಪಡಿಸಲು ದರೋಡೆಗಿಳಿದ ಪ್ರಿಯಕರ!

ಶನಿವಾರ, 4 ಡಿಸೆಂಬರ್ 2021 (09:43 IST)
ನವದೆಹಲಿ: ಗರ್ಲ್ ಫ್ರೆಂಡ್ ಖುಷಿಪಡಿಸಲು ಯುವಕರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಆದರೆ ಅದೇ ರೀತಿ ಸರ್ಕಸ್ ಮಾಡಲು ಹೋಗಿ ಇಲ್ಲೊಬ್ಬ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ಗೆ ಐಫೋನ್ ಕೊಡಿಸಬೇಕೆಂದು ಅಂದುಕೊಂಡಿದ್ದ. ಆದರೆ ಕೊಳ್ಳುವಷ್ಟು ದುಡ್ಡಿರಲಿಲ್ಲ. ಹೀಗಾಗಿ ಗೆಳೆಯನ ಜೊತೆ ಸೇರಿಕೊಂಡು ದರೋಡೆಗಿಳಿದ.

ಐಫೋನ್ ಕದ್ದು ಗೆಳತಿಗೆ ಕೊಡುವ ಮೊದಲೇ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಪ್ರಿಯಕರ ಮತ್ತು ಆತನಿಗೆ ಸಹಾಯ ಮಾಡಿದ ಗೆಳೆಯ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ