2019ರಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ: ಸ್ವಾಮಿ

ಶನಿವಾರ, 18 ಜೂನ್ 2016 (16:15 IST)
2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯುವಜನಾಂಗ ಮೋದಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲಿದೆ ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಭವಿಷ್ಯ ನುಡಿದಿದ್ದಾರೆ. 

ಪ್ರಥಮ ಬಾರಿ ಜಾತಿಮಿತಗಳನ್ನು ಮೀರಿ, ಭಾರತೀಯತೆ, ರಾಷ್ಟ್ರೀಯತೆ ತತ್ವದ ಮೇಲೆ ಮತ ಚಲಾವಣೆಯಾಗಿದೆ. ಕೆಲವರು ಹೇಳುತ್ತಿದ್ದಾರೆ- ಇದು ಹಿಂದುತ್ವ, ಜಾತೀಯತೆ, ಪ್ರಾದೀಶಿಕತೆ ಮೀರಿ ನಡೆದಿರುವ ಬೆಳವಣಿಗೆ. ಯುವಜನಾಂಗ ಈ ಮನಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನಿಸುತ್ತಿದೆ. ಕಾರಣ ಅವರಲ್ಲಿ ರಾಷ್ಟ್ರೀಯತೆ ಭಾವ ಹೆಚ್ಚುತ್ತಿದೆ ಎಂದು ಸ್ವಾಮಿ ಹೇಳಿದ್ದಾರೆ. 
 
2019ರಲ್ಲೂ ಇದು ಮರುಕಳಿಸಲಿದೆ. ಬಿಜೆಪಿ ಮತ್ತೆ ಬಹುಮತಗಳಿಸಲಿದೆ. ನಾವು ಮತ್ತೆ 5 ವರ್ಷಗಳ ಕಾಲ ಉತ್ತಮ ಆಡಳಿತ ಮತ್ತು ರಾಜಕೀಯ ಸ್ಥಿರತೆಯುಳ್ಳ ಸರ್ಕಾರವನ್ನು ನೀಡಲಿದ್ದೇವೆ ಎಂದು ಸ್ವಾಮಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ