ಅರ್ನಬ್ ಗೋಸ್ವಾಮಿ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಝಾಕೀರ್ ನಾಯ್ಕ
ಜುಲೈ 16 ರಂದು ಜಾರಿಯಾಗಿರುವ ನೋಟಿಸ್‌ನಲ್ಲಿ, ಗೋಸ್ವಾಮಿ ತಾವು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನನ್ನ ವಿರುದ್ಧ ಸುಳ್ಳು ಮತ್ತು ಮಾನನಷ್ಟಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ ಮಾಧ್ಯಮ ತನಿಖೆ ಮೂಲಕ ತಮ್ಮನ್ನು ತಪ್ಪಿತಸ್ಥನ ರೀತಿಯಲ್ಲಿ ಬಿಂಬಿಸಲಾಗಿತ್ತು . ಈ ಮೂಲಕ ಸಾರ್ವಜನಿಕರ ಮುಂದೆ ನನ್ನ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಝಾಕೀರ್ ಆರೋಪಿಸಿದ್ದಾರೆ.
ಝಾಕೀರ್ ಪರ ವಕೀಲ ಮುಬಿನ್ ಸೋಲ್ಕರ್ ಈ ದಾವೆಯನ್ನು ಹೂಡಿದ್ದಾರೆ.
ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ನಡೆದ ಉಗ್ರ ದಾಳಿಗೆ ಝಾಕೀರ್ ಅವರೇ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಬಾಂಗ್ಲಾ ಮತ್ತು ಭಾರತ ದೇಶಗಳೆರಡ ತನಿಖಾ ತಂಡಗಳು ಅವರ ಮೇಲೆ ತೀವ್ರ ನಿಗಾ ಇಟ್ಟಿವೆ.