ಭಾರತಕ್ಕೆ ಕಾಲಿಟ್ಟ ಮಾರಕ ಜೀಕಾ ವೈರಸ್

ಭಾನುವಾರ, 28 ಮೇ 2017 (08:37 IST)
ನವದೆಹಲಿ: ಮಾರಕ ಜೀಕಾ ವೈರಾಣು ಭಾರತಕ್ಕೆ ಕಾಲಿಟ್ಟಿದೆ. ಅಹಮ್ಮದಾಬಾದ್ ನ ಮೂವರಲ್ಲಿ ವೈರಾಣು ಇರುವುದು ಪತ್ತೆಯಾಗಿದೆ.

 
ಕಳೆದ ವರ್ಷ ವಿದೇಶಗಳಲ್ಲಿ ಕಂಗೆಡಿಸಿದ್ದ ಜೀಕಾ ವೈರಸ್ ಇದೀಗ ಭಾರತದ ಮೂವರು ವ್ಯಕ್ತಿಗಳಿಗೆ ತಗುಲಿರುವುದನ್ನು ಸ್ವತಃ ವಿಶ್ವ ಸಂಸ್ಥೆಯ ಆರೋಗ್ಯ ವಿಭಾಗ (ಡಬ್ಲ್ಯುಎಚ್ಒ) ದೃಢಪಡಿಸಿದೆ.

ಗುಜರಾತ್ ನ ಅಹಮ್ಮದಾಬಾದ್ ನ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಿಳೆಯರ ಪೈಕಿ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ. ಹಾಗಿದ್ದರೂ ಭಾರತಕ್ಕೆ ಪ್ರಯಾಣಿಸುವ ವಿದೇಶಿಯರಿಗೆ ವಿಶ್ವಸಂಸ್ಥೆ ಯಾವುದೇ ಎಚ್ಚರಿಕೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ