ಬಿಜೆಪಿಯಲ್ಲಿ ಭಿನ್ನಮತಕ್ಕೆ ಅವಕಾಶವಿಲ್ಲ: ಸುಷ್ಮಾ ಸ್ವರಾಜ್

ಭಾನುವಾರ, 6 ಮಾರ್ಚ್ 2011 (14:24 IST)
PTI
ಸಿವಿಸಿ ಪ್ರಹಸನದ ಹೊಣೆಗಾರಿಕೆಯನ್ನು ವಹಿಸಿಕೊಂಡ ನಂತರ ವಿಭಿನ್ನ ಹೇಳಿಕೆಗಳನ್ನು ನೀಡಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಮಧ್ಯ ಭಿನ್ನಾಭಿಪ್ರಾಯವಿದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಬಹಿರಂಗವಾಗಿವೆ.

ಆದರೆ, ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಬಿಜೆಪಿ ನಾಯಕ ಸುಷ್ಮಾ ಸ್ವರಾಜ್, ಅಂತಹ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ.ಇದಕ್ಕೆ ಟ್ವಿಟ್ಟರ್‌ನಲ್ಲಿರುವ ಕೆಲ ವ್ಯಕ್ತಿಗಳ ಕೃತ್ಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದೊಳಗೆ ಮತ್ತು ನನ್ನ ಹಾಗೂ ಅರುಣ್ ಜೇಟ್ಲಿ ಮಧ್ಯ ಖಂಡಿತವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರಧಾನಿಯವರು ಸಂಸತ್ತಿನಲ್ಲಿ ಹೇಳಿಕೆ ನೀಡುವುದಾಗಿ ಪ್ರಕಟಿಸಿದ್ದರಿಂದ ನಾನು ಟ್ವಿಟ್ಟರ್‌ನಲ್ಲಿ ದಾಖಲಿಸಲಿಲ್ಲ ಎಂದು ತಿಳಿಸಿದ್ದಾರೆ.

ಪ್ರಧಾನಿಯವರ ಹೇಳಿಕೆಯ ನಂತರ ವಿಷಯ ಇಲ್ಲಿಗೆ ಅಂತ್ಯಗೊಳ್ಳಲಿ ಎಂದು ಸುಷ್ಮಾ ಹೇಳಿದ್ದರೆ, ಇದು ಸಾಲದು ಸಿಂಗ್ ಸಂಸತ್ತಿನಲ್ಲಿ ಹೇಳಿಕೆ ನೀಡುವ ಅಗತ್ಯವಿದೆ ಎಂದು ಜೇಟ್ಲಿ ಒತ್ತಾಯಿಸಿದ್ದರು.

ವೆಬ್ದುನಿಯಾವನ್ನು ಓದಿ