ಬೇಕಾಗುವ ಸಾಮಾನುಗಳು : ಜೀರಿಗೆ - ಅರ್ಧ ಚಮಚ ಬೆಳ್ಳುಳ್ಳಿ - ಸ್ವಲ್ಪ ಮೊಟ್ಟೆ - 2-3 ಎಣ್ಣೆ - 1 ಚಮಚ ಉಪ್ಪು - ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು - ಸ್ವಲ್ಪ ಗರಂ ಮಸಾಲಾ ಪುಡಿ - ಸ್ವಲ್ಪ ಕೆಪು ಮೆಣಸಿನ ಪುಡಿ - ಸ್ವಲ್ಪ
ಮಾಡುವ ವಿಧಾನ:
ಮೊಟ್ಟೆಯನ್ನು ಬೇಯಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.ಬಾಣಲೆಯನ್ನು ಎಣ್ಣೆ ಬಿಸಿ ಮಾಡಿ ಇದಕ್ಕೆ ಸಣ್ಣಗೆ ಬಹೆಚ್ಚಿದ ನೀರುಳ್ಳಿ, ಟೊಮ್ಯಾಟೋ, ಬೆಳ್ಳುಳ್ಳಿ ಮತ್ತು ಜೀರಿಗೆ ಹಾಕಿ ಹುರಿಯಿರಿ.ನಂತರ ಇದಕ್ಕೆ ಗರಂ ಮಸಾಲಾ, ಕೆಂಪುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.ನಂತರ ಮೊಟ್ಟೆ ಸೇರಿಸಿ ಎರಡು ನಿಮಿಷ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.