ಎಗ್ ಚಾಟ್

ಬೇಕಾಗುವ ಸಾಮಗ್ರಿಗಳು: ಆರು ಚೆನ್ನಾಗಿ ಬೇಯಿಸಿದ ಮೊಟ್ಟೆ, ಒಂದು ಈರುಳ್ಳಿ, 4-5 ಹಸಿಮೆಣಸು. 4-5 ಕೊತ್ತಂಬರಿ ಸೊಪ್ಪು, ಅರ್ಧ ಕಪ್ ಟೊಮ್ಯಾಟೋ ಸಾಸ್, ಒಂದು ಚಮಚ ಮೆಣಸಿನಹುಡಿ, 1 ಚಮಚ ಚಾಟ್ ಮಸಾಲಾ, ಎರಟು ಚಮಚ ಹುಣಸೆಹಣ್ಣಿನ ಪೇಸ್ಟ್, ಎರಡು ಚಮಚ ಬೆಲ್ಲ, ಉಪ್ಪು.

ಮಾಡುವ ವಿಧಾನ: ಹುಣಸೇಹಳ್ಳಿನ ಪೇಸ್ಟ್, ಬೆಲ್ಲವನ್ನು ಕುದಿಯುವ ಸ್ವಲ್ಪ ನೀರಿಗೆ ಹಾಕಿ ಚಟ್ನಿ ಮಾಡಿಡಿ. ಬೇಯಿಸಿದ ಮೊಟ್ಟೆಗಳನ್ನು ನಾಲ್ಕು ಚೂರುಗಳನ್ನಾಗಿ ಮಾಡಿ. ಅದಕ್ಕೆ ಚೆನ್ನಾಗಿ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಸಾಸ್, ಚಾಟ್ ಮಸಾಲಾ, ಮೆಣಸಿನಹುಡಿ, 1 ಚಮಚ ಹುಣಸೇಹಣ್ಣಿನ ಚಟ್ನಿ, ರುಚಿಗೆ ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ. ನಿಂಬೆಹಣ್ಣಿನ ಚೂರು ಹಾಗೂ ಕೊತ್ತಂಬರಿ ಸೊಪ್ಪನಿಂದ ಅಲಂಕರಿಸಿ ತಿನ್ನಲು ಕೊಡಿ.

ವೆಬ್ದುನಿಯಾವನ್ನು ಓದಿ