ಚಿಕನ್ ಪಕೋಡ

ಬೇಕಾಗುವ ಸಾಮಾಗ್ರಿಗಳು
ಅರ್ಧ ಕೆ.ಜಿ ಕೋಳಿಮಾಂಸ(ಚರ್ಮ ಮತ್ತು ಮೂಳೆಗಳಿಲ್ಲದ)
100 ಗ್ರಾಂ. ಜೋಳದ ಹಿಟ್ಟು, ಮಸಾಲೆ ಪುಡಿ
ರುಚಿಗೆ ತಕ್ಕಷ್ಟು ಮೆಣಸಿನ ಪುಡಿ, ಉಪ್ಪು
2-3 ಎಸಳು ಬೆಳ್ಳುಳ್ಳಿ
ಎಣ್ಣೆ

ತಯಾರಿಸುವ ವಿಧಾನ:

ಜೋಳದ ಹಿಟ್ಟನ್ನು ಮಸಾಲೆ ಪುಡಿ, ನೀರು ಮತ್ತು ಉಪ್ಪು, ಮೆಣಸಿನ ಪುಡಿ, ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿ ಗಟ್ಟಿಯೂ ಅಲ್ಲ ನೀರೂ ಅಲ್ಲದ ಹಾಗೆ ಮೆದು ಪೇಸ್ಟ್ ಮಾಡಿ. ನಂತರ ಈ ಪೇಸ್ಟ್‌ಗೆ ಮಾಂಸದ ತುಂಡುಗಳನ್ನು ಬೆರೆಸಿ. ಈ ಮಿಶ್ರಣವನ್ನು ಸುಮಾರು 30 ನಿಮಿಷಗಳವರೆಗೆ ಹಾಗೇ ಇಡಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಈ ತುಂಡುಗಳನ್ನು ಕರಿಯಿರಿ. ಮಾಂಸ ಚೆನ್ನಾಗಿ ಬೆಂದ ನಂತರ ತೆಗೆಯಿರಿ. ಈಗ ಬಿಸಿ ಬಿಸಿ ಚಿಕನ್ ಪಕೋಡ ರೆಡಿ.

ವೆಬ್ದುನಿಯಾವನ್ನು ಓದಿ