ಚಿಕನ್ ಫ್ರೈಡ್ ಸುಕ್ಕ

ಬೇಕಾಗುವ ಸಾಮಾಗ್ರಿಗಳು

500 ಗ್ರಾಂ. ಕೋಳಿಮಾಂಸ
1 ಸ್ಪೂನ್ ಕೊತ್ತಂಬರಿ ಪುಡಿ, ಎಣ್ಣೆ
½ ಟೀಸ್ಪೂನ್ ಜೀರಿಗೆ, ಕರಿಮೆಣಸು ಪುಡಿ
6 ಬೆಳ್ಳುಳ್ಳಿ ಎಸಳುಗಳು
6 ಕರಿದ ಕೆಂಪು ಮೆಣಸು
1 ತುರಿದ ತೆಂಗಿನಕಾಯಿ
1 ಈರುಳ್ಳಿ

ತಯಾರಿಸುವ ವಿಧಾನ:

ಈರುಳ್ಳಿಯನ್ನು ಕತ್ತರಿಸಿ ರೆಡಿ ಮಾಡಿಟ್ಟುಕೊಳ್ಳಿ. ಸಣ್ಣ ಕರಿಯುವ ಪಾತ್ರೆಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಬಿಸಿಮಾಡಿ, ಕರಿಮೆಣಸು, ಅರಿಶಿನ, ಕೊತ್ತಂಬರಿಯನ್ನು ಪರಿಮಳ ಬರುವವರೆಗೆ ಹುರಿಯಿರಿ. ತಣ್ಣಗಾದ ನಂತರ ಅದನ್ನು ಹುರಿದ ಮೆಣಸಿನೊಂದಿಗೆ ಅರೆಯಿರಿ. ತುರಿದ ತೆಂಗಿನಕಾಯಿ, ಬೆಳ್ಳುಳ್ಳಿ ಮತ್ತು ಜೀರಿಗೆಯನ್ನು ನೀರು ಹಾಕದೆ ಸ್ವಲ್ಪ ಮಾತ್ರ ಅರೆಯಿರಿ. ಫ್ರೈ ಮಾಡುವ ಪಾತ್ರೆ ತೆಗೆದುಕೊಂಡು ಮಾಂಸದ ತುಂಡುಗಳನ್ನು ಹಾಕಿ, ಮೊದಲು ಮಾಡಿದ ಪೇಸ್ಟ್‌‌ನೊಂದಿಗೆ ಸುಮಾರು 25 ನಿಮಿಷಗಳವರೆಗೆ ಬೇಯಿಸಿರಿ. ನಂತರ ತೆಂಗಿನಕಾಯಿ ಪೇಸ್ಟ್ ಅನ್ನು ಸೇರಿಸಿ ಮತ್ತೆ 2 ನಿಮಿಷ ಬೇಯಿಸಿರಿ. ಮತ್ತೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ, ಕರಿಬೇವನ್ನು ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ, ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ. ಇದನ್ನು ಮಾಂಸಕ್ಕೆ ಹಾಕಿ, ಮಿಶ್ರ ಮಾಡಿ. ಈಗ ಚಿಕನ್ ಸುಕ್ಕ ರೆಡಿ."

ವೆಬ್ದುನಿಯಾವನ್ನು ಓದಿ