ಬೇಕಾಗುವ ಸಾಮಾಗ್ರಿಗಳು ಅರ್ಧ ಕೆ.ಜಿ ಮಾಂಸ 5-6 ಕಟ್ಟು ಬಸಳೆ 1-2 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಟೊಮಾಟೊ, ಈರುಳ್ಳಿ 1 ಟೀಸ್ಪೂನ್ ಕೊತ್ತಂಬರಿ ಪುಡಿ, ಮೆಣಸಿನ ಪುಡಿ 1 ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಹಾಕಿ ಕರಿಮೆಣಸು, ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಮಾಂಸವನ್ನು ಚೆನ್ನಾಗಿ ತೊಳೆದು ಇದರೊಂದಿಗೆ ಹುರಿಯಿರಿ. ಉಪ್ಪು, ಸ್ವಲ್ಪ ನೀರು ಹಾಕಿ ಬಾಣಲೆ ಮುಚ್ಚಿ ಮಾಂಸ ಬೇಯುವವರೆಗೆ ಬೇಯಿಸಿ. ಬೇರೆ ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಟೊಮಾಟೊ, ಬಸಳೆ, ಸ್ವಲ್ಪ ಮಾಂಸದ ರಸವನ್ನು ಹಾಕಿ ಬೇಯಿಸಿರಿ. ಬಸಳೆ ಸೊಪ್ಪು ಚೆನ್ನಾಗಿ ಬೆಂದ ನಂತರ ಬೇಯಿಸಿದ ಮಾಂಸವನ್ನು ಹಾಕಿ ಮಿಶ್ರ ಮಾಡಿ, ಸ್ವಲ್ಪ ಹೊತ್ತು ಬೇಯಿಸಿರಿ. ಈಗ ಪಾಲಕ್ ಮಟನ್ ರೆಡಿ.