ಫಿಶ್ ತಂದೂರಿ

ಬೇಕಾಗುವ ಸಾಮಗ್ರಿ: ಅರ್ಧ ಕೆಜಿ ತುಂಡು ಮಾಡಿದ ಸಿಯರ್ ಮೀನು, ಒಂದುವರೆ ಚವಚ ಬೆಳ್ಳುಳ್ಳಿಶುಂಠಿ ಪೇಸ್ಟ್, 2 ಟೀ ಚಮಚ ಮೆಣಸಿನಪುಡಿ, 1 ಟೀ ಚಮಚ ಜೀರಿಗೆ ಪುಡಿ, ಅರ್ಧ ಟೀಚಮಚ ಅರಿಶಿನಪುಡಿ, 2 ಟೀಚಮಚ ನಿಂಬೆರಸ, 1 ಟೀಚಮಚ ಗರಂಮಸಾಲೆ ಪುಡಿ, 3 ಚಿಟಿಕೆ ಚಿಕನ್ ಬಣ್ಣ, 2 ಟೇಬಲ್ ಚಮಚ ಉಪ್ಪು, ಹುರಿಯಲು ಎಣ್ಣೆ.

ಮಾಡುವ ವಿಧಾನ: ಒಂದುವರೆ ಚವಚ ಬೆಳ್ಳುಳ್ಳಿಶುಂಠಿ ಪೇಸ್ಟ್, 2 ಟೀ ಚಮಚ ಮೆಣಸಿನಪುಡಿ, 1 ಟೀ ಚಮಚ ಜೀರಿಗೆ ಪುಡಿ, ಅರ್ಧ ಟೀಚಮಚ ಅರಿಶಿನಪುಡಿ, 2 ಟೀಚಮಚ ನಿಂಬೆರಸ, 1 ಟೀಚಮಚ ಗರಂಮಸಾಲೆ ಪುಡಿ, 3 ಚಿಟಿಕೆ ಚಿಕನ್ ಬಣ್ಣ ಇವಿಷ್ಟನ್ನು ಸೇರಿಸಿ ರುಬ್ಬಿ ಪೇಸ್ಟ್ ಮಾಡಿ. ಮೀನು ತುಂಡುಗಳನ್ನು ಉಪ್ಪಿನಲ್ಲಿ ಹಾಗೂ ಮಾಡಿಟ್ಟ ಪೇಸ್ಟಿನಲ್ಲಿ ಚೆನ್ನಾಗಿ ತಿಕ್ಕಿ ನೆನೆಹಾಕಿ. ಕನಿಷ್ಟ 20 ನಿಮಿಷ ನೆನೆಹಾಕಿದ ನಂತರ ಕಾವಲಿಯಲ್ಲಿ ಎಣ್ಣೆ ಕಾಯಿಸಿ, ಮೀನಿನ ಎರಡೂ ಕಡೆ ಹೊನ್ನಿನ ಕಂದು ಬಣ್ಣ ಬರುವವರೆಗೆ ಮೀನಿನ ತುಂಡನ್ನು ಹುರಿಯಿರಿ.

ವೆಬ್ದುನಿಯಾವನ್ನು ಓದಿ